೧. ಗಾಂಧೀಜಿಯವರ ತಂದೆಗೆ ಒಬ್ಬರಾದಮೇಲೆ ಒಬ್ಬರಂತೆ ನಾಲ್ವರು ಹೆಂಡಿರು. ಗಾಂಧೀಜಿಯವರ ತಾಯಿ ಕೊನೆಯವರು. ಅವರ ನಾಲ್ಕು ಮಕ್ಕಳಲ್ಲಿ ಗಾಂಧೀಜಿ ಕೊನೆಯವರು
೨. ಗಾಂಧೀಜಿಯ ಪಾರ್ಥಿವ ಶರೀರವನ್ನು ಅಲಂಕರಿಸಿದ ಮಿಲಿಟರಿ ಮೋಟಾರಿನಲ್ಲಿ ಇಡಲಾಗಿತ್ತು. ಈ ವಾಹನವನ್ನು ಹಗ್ಗ ಕಟ್ಟಿ ೨೦೦ ಜನ ಭಾರತೀಯ ಸೇನಾಪಡೆಯ ಯೋಧರು, ರಥ ಎಳೆದಂತೆ ಎಳೆದುಕೊಡು , ಐದೂವರೆ ಮೈಲಿ ದೂರದ ಸ್ಮಶಾನಭೂಮಿಗೆ ಮೆರವಣಿಗೆಯಲ್ಲಿ ಕೊಂಡೊಯ್ದರು.
೩. ಗಾಂಧೀಜಿಯ ಚಿತಾಭಸ್ಮವನ್ನು ಸಂಗ್ರಹಿಸುತ್ತಿದ್ದಾಗ, ಅದರಲ್ಲಿ ಅವರ ದೇಹದಲ್ಲಿದ್ದ ಗುಂಡೊಂದು ಸಿಕ್ಕಿತು.
೪. ಗಾಂಧೀಜಿ ಮೊದಲಬಾರಿಗೆ ಭಗವದ್ಗೀತೆ ಓದಿದ್ದು ಅವರು ಇಪ್ಪತ್ತು ವರ್ಷದವರಾಗಿದ್ದಾಗ. ಅದೂ ಇಂಗ್ಲೀಷ್ ಭಾಷಾಂತರದ ಮೂಲಕ. ನಮ್ಮ ಧರ್ಮಗ್ರಂಥವನ್ನು ಪರಭಾಷೆಯಲ್ಲಿ ಓದಬೇಕಾಗಿ ಬಂದದ್ದಕ್ಕೆ ನಾಚಿಕೆಗೊಂಡ ಅವರು, ಮುಂದೆ ಮೂಲಸಂಸ್ಕೃತದಲ್ಲಿ ಗೀತೆಯನ್ನು ಓದಿದ್ದಷ್ಟೇ ಅಲ್ಲ , ಅದನ್ನು ಗುಜರಾತಿಗೂ ಭಾಷಾಂತರಿಸಿದರು ( ಇದನ್ನು ಮಹಾದೇವ ದೇಸಾಯಿ ನಂತರ ಇಂಗ್ಲೀಷಿಗೆ ತರ್ಜುಮೆ ಮಾಡಿದರು). ಗಾಂಧೀಜಿಯ ಜೀವನದುದ್ದಕ್ಕೂ ಅವರಿಗೆ ಭಗವದ್ಗೀತೆ ದಾರಿದೀಪವಾಗಿತ್ತು.
೫.ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಹೋದ ಹೊಸದರಲ್ಲಿ, ಮೊದಲಬಾರಿಗೆ ನ್ಯಾಯಾಲಯದಲ್ಲಿ ಮೊಕದ್ದಮೆಗಾಗಿ ಹೋದರು. ಗಾಂಧೀಜಿಯು ಮುಂಡಾಸು ತೆಗೆದಿಡಬೇಕೆಂದು ಅಲ್ಲಿಯ ಮ್ಯಾಜಿಸ್ಟ್ರೇಟ್ ಅಪ್ಪಣೆ ಮಾಡಿದ. ಒಪ್ಪದ ಗಾಂಧೀಜಿ ಕೋರ್ಟಿನಿಂದಲೇ ಹೊರನಡೆದರು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!