ಜಗದ್ದೀಪ

ಹೊತ್ತುವ ಹೊತ್ತಿನಲಿ

ಮುಂಜಾನೆ ಮಂಜಿನಲಿ

ಬಾಗಿಲ ಬಳಿ

ಯ

ಹಸನು ಸಾರಣೆಯಾಸಿನಲಿ

ನಿನ್ನ ನೀಳವಾದ 

ಚಿಗುರು ಹೆಬ್ಬೆರಳ 

ತೋರುಬೆರಳ 

ನಡು- 

ವೆ 

ಹಿತ ಕೊಡುವ

ಮೃದು ಸ್ಪರ್ಶದಿಂದ  

ವಾರಿಧಿಯ ಮೈ ಮೇಲೆ

ಚಿತ್ರ - ಚಿತ್ತಾರವಾಗಿ

ಮೂಡಿ

ಸ್ಫುಟಗೊಳ್ಳುವ 

ಹೃದಯದಲಿ ಅಪ್ಯಾಯತೆಯ 

ಕಾರಂಜಿ ಚಿಮ್ಮಿಸುವ 

ಕಂಗಳಿಗೆ ತಂಪೆರೆಯುವ 

ಕಾಮನ ಬಿಲ್ಲಿನ 

ರಾಗ ರಂಜಿತ 

'ರಂಗೋಲಿ ' ಯಾಗುವಾಸೆ !!