ಚಿಕದೇವರಾಜ ಒಡೆಯರು ಎಂಬುವರು ಮೈಸೂರು ಮಹಾರಾಜರು. ಅವರು ಬರೆದ ಪುಸ್ತಕ ಶ್ರೀ ಚಿಕದೇವರಾಜ ಬಿನ್ನಪ. ಈ ಪುಸ್ತಕವು ವಿಶಿಷ್ಟ ಅದ್ವೈತವೆಂದೂ ಉಭಯವೇದಾಂತ ಎಂದೂ ಪ್ರಸಿದ್ಧವಾಗಿರುವ ಶ್ರೀ ವೈಷ್ಣವ ಸಿದ್ಧಾಂತದ ಬಗೆಗೆ ಇದೆ. ಹಳೆಗನ್ನಡದಲ್ಲಿ ಇದೆ. ಹೊಸಗನ್ನಡದಲ್ಲಿ ಜಿ. ಪಿ. ರಾಜರತ್ನಂ ಅವರು ಅನುವಾದ ಮಾಡಿದ್ದಾರೆ. ಈ ಪುಸ್ತಕವು Archive.org ತಾಣದಲ್ಲಿ ಪುಕ್ಕಟೆಯಾಗಿ ಲಭ್ಯವಿದೆ. ಅದನ್ನು ಇಳಿಸಿಕೊಂಡು ನೀವು ಓದಬಹುದು.

ಈ ಪುಸ್ತಕವು ಸುಮಾರು ನೂರು ಪುಟಗಳಲ್ಲಿ ಇದೆ. ಈ ಕೃತಿಯಲ್ಲಿ ಸುಮಾರು 30 ಬಿನ್ನಪಗಳಿವೆ. ಯಾವ ಜಾತಿಯಲ್ಲಿ ಮನುಷ್ಯನು ಹುಟ್ಟಿದ್ದರೂ ತತ್ವವನ್ನು ತಿಳಿದು ಶ್ರೀ ಕೃಷ್ಣನಲ್ಲಿ ಭಕ್ತಿ ಮಾಡಿದರೆ ಮುಕ್ತಿ ತಪ್ಪದು ಎಂದು ತತ್ವವನ್ನು ಕನ್ನಡದಲ್ಲಿಯೇ ಅಕ್ಷರವನ್ನು ಅರಿಯದವರಿಗೂ ತಿಳಿಸಿಕೊಡಲು ತಮ್ಮ ಕುಲದೇವತೆಯಾದ ಯಾದವಗಿರಿ ನಾರಾಯಣನ ಅಡಿದಾವರೆಗಳಲ್ಲಿ ಬಿನ್ನಹ ಮಾಡುವ ನೆಪದಲ್ಲಿ 30 ಬಿನ್ನಹಗಳನ್ನು ಮಹಾರಾಜರು ಪೋಣಿಸಿದರಂತೆ. ಅದೇ ಈ ಪುಸ್ತಕ.
ಸೊಕ್ಕಿನಿಂದ ಕನ್ನಡ ನಾಡನ್ನು ಹೊಕ್ಕ ಶಿವಾಜಿ ಎಂಬ ಮಾತು ಇಲ್ಲಿದೆ!
ಶ್ರೀ ವೈಷ್ಣವ ಸಿದ್ಧಾಂತವನ್ನು ತಿಳಿಯಲು ಆಸಕ್ತರು ಈ ಪುಸ್ತಕವನ್ನು ಓದಬಹುದು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!