ಹಲವು ಬಣ್ಣದ ನಿನ್ನ ದೇಹ

ಮಾಯವಾದರೂ ಬೆಳೆವ ಮೋಹ 

ಕ್ಷಣ ಮಾತ್ರದ ನಿನ್ನ ನೋಟ 

ನಯನಗಳಿಗೆ ಹುಡುಕುವ ಆಟ 

ಅರಳಿದ ಹೂವು ನಿನ್ನ ಇನಿಯ 

ನಲಿ ನಲಿದಾಡು ಕಾಣುವ ಸವಿಯ 

ಹೂವಿಂದ ಹೂವಿಗೆ ನಿನ್ನ ಪಯಣ 

ಮನದಾಳದಿ ಮೂಡಿದೆ ಗಾಯನ 

ಚೆಲುವ ತುಂಬಿದ ನಿನ್ನ ಚಿತ್ತಾರ 

ನಗು ಚುಮ್ಮಿದೆ ಮಾಡಿ ಪ್ರಚಾರ

ಸುಂದರ ಲತೆಯ ನಿನ್ನ ಬಣ್ಣ 

ಖುಷಿಯಿಂದ ಮುತ್ತಿದು ಬಾ ಚಿನ್ನ 

ಬಣ್ಣದ ಚಿಟ್ಟೆ ನಿನ್ನ ಹೆಸರು 

ಪ್ರೀತಿಗೆ ಬಿದ್ದು ನಾನಾದೆ ಕೆಸರು