ಕಂದಮ್ಮನ ಬೆಳೆಸುತ್ತಿರುವ
ಅಮ್ಮನ ಗರ್ಭಕೋಶದಲಿ
ನಲಿದಾಡುತಿದೆ ಕೂಸು ಜಗವ ಕಾಣುವ
ಬಯಕೆಯಲಿ
ಕನಸಿನ ಗೋಪುರ ರಚಿಸಿದೆ
ಅಮ್ಮನ ಹೃದಯದಲಿ
ಹಾಗೆನ್ನುವೆ ಹೀಗೆನ್ನುವೆ
ಸಂತಸದ ಗಳಿಗೆಯ ಕಾಯುವೆ
ಕಂದಮ್ಮನ ಆಡಿಸುವ
ಲಾಲಿ ಹಾಡು ಕೇಳಿಸುವ
ಆಸೆಗಳ ದೀಪ ಬೆಳಗುತಿದೆ
ಬಯಸದೆ ಇದ್ದರೂ ಬಯಸಿ ಬಂದಿದ್ದರೂ
ದೇವರ ದಯೆ ಇಲ್ಲದೇ ಅಮ್ಮನ ಮಾಯೆ ಕಾಣದೆ
ಕಲ್ಲ ಮನದ ಮಾನವರು
ಕಿತ್ತೆಸೆದಿರುವರು ಹೆಣ್ಣು ಕಂದಮ್ಮನನು
ಪಾಪ ಆ ಕೂಸಿನದಲ್ಲ
ಪಾಪಿಗಳು ಹೆಣ್ಣು ತೊರೆದವರು
ಜಗವ ಬೆಳಗಲು ಬರುವ ಜೀವಕೆ
ಕೊಳ್ಳೆ ಇಟ್ಟು ಕತ್ತಲು ನೀಡಿದವರು
ಅಮ್ಮನ ಕರುಳಿಗೆ ಸುತ್ತಿದ ಜೀವವ
ಕೈಯ್ಯಾರೆ ಕೊಂದು ಹೆಣ ಮಾಡಿದವರು
ಎದೆಹಾಲು ಉಣಿಸುವ ಆ ತಾಯಿಗೆ
ಕಂಣ್ಣೀರಿನ ಹೊಳೆಯಲ್ಲಿ ಮುಳುಗಿಸಿದವರು
ತುತ್ತು ಮುತ್ತು ನೀಡುವ ಮಮತೆಗೆ
ಮಣ್ಣಿನಲ್ಲಿ ಹಾಕದೆ ಜೀವಂತ ಶವ ಮಾಡಿದರು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)