ಎಕ್ಕಡ ಎನ್ನಡವಾಗಿದೆ
ನಮ್ಮಿ ಕನ್ನಡ
ಕನ್ನಡದ ಕನ್ನಡಿಯಾಗಲಿ
ಕರುನಾಡ ಕನ್ನಡ
ಉಸಿರ ಉಸಿರಲಿ
ಹಸಿರಾಗಲಿ ಕನ್ನಡ
ಎದೆ ಬಡಿತವು
ಹೇಳಲಿ ಕನ್ನಡ
ಆಲಿಸುವ ಮನಕೆ
ಕೇಳಲಿ ಇಂಪಾದ ಕನ್ನಡ
ಕಣ್ಣಿನ ಜೊತೆಯಾಗಿ
ಕಣ್ಣಾಗಲಿ ಕನ್ನಡ
ರಕ್ತವಾಗಿ ಹರಿಯಲಿ
ದೇಹದಲಿ ಕನ್ನಡ
ಹೃದಯ ತುಂಬಿರಲಿ
ಪ್ರೀತಿಯಿಂದ ಕನ್ನಡ
ಹುಟ್ಟಿದ ಕೂಸು
ನುಡಿಯಲಿ ಕನ್ನಡ
ಕುಣಿಯುವ ನವಿಲಾಗಿ
ಕುಣಿದಾಡಿಸುವ ಕನ್ನಡ
ಕಲಿಯಿರಿ ಕಲಿಸಿರಿ
ಜ್ಞಾನದೀಪ ಕನ್ನಡ
ಮನದಲಿ ಮನೆಯಲಿ
ಬೆಳಗಲಿ ಕನ್ನಡ
ನುಡಿ ಕನ್ನಡ ನಡೆ ಕನ್ನಡ
ತನು ಕನ್ನಡ ಮನ ಕನ್ನಡ
ಕಲಿಯುವಾ ಕನ್ನಡ ನಲಿಯುವಾ ಕನ್ನಡ
ಮರೆಸುವಾ ನಾವೆಲ್ಲರೂ ಎಕ್ಕಡ ಎನ್ನಡ
ಬಯಸಿರಿ ಬೆಳೆಸಿರಿ
ಕರುನಾಡ ಕನ್ನಡ
ಹಸಿವಾಗಲಿ ಹಸಿರಾಗಲಿ
ಕರುನಾಡ ಕನ್ನಡ
ದೇಹವಾಗಲಿ ಜೀವವಾಗಲಿ
ಕರುನಾಡ ಕನ್ನಡ
ಬರೆಯುವ ಶಬ್ದ ಕೇಳುವ ನಾದ
ಹಾಕುವ ತಾಳ ಸವಿಯುವ ಸ್ವಾದ
ಒಂದೇ ಕನಸು ಕನ್ನಡವಾಗಲಿ ನನ್ನ ಕನ್ನಡ
ನನಸಾಗಲಿ ಸದಾ ಬೆಳಗುವ ನಂದಾದೀಪದ ಕನ್ನಡ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (4)