ನಾಡದೇವಿಯ ಪೂಜೆಗೈಯಲು ದಿಟ್ಟ ನುಡಿಗಳ ಕೋಶ ಹೊಸೆದಿಹ ಇಳಿದು ಬ೦ದನೊ ಗುಡಿಯ ಬಸವನು ಸುತ್ತಮುತ್ತಲು ಮಾರ್ದವಿಸಿತದೊ
ಕರವ ಜೋಡಿಸಿ ಭಜಕರು
ದೇಗುಲದ ರಥವನ್ನು ಸೊಗಯಿಸಿ
ಎಳೆದು ತರುತಿಹರೆಲ್ಲರು IIನಾಡII
ಶತಕದ೦ಚಿನ "ಜೀವಿ" ಗೆ
ಕಟ್ಟಿ ನಾಯಕಪಟ್ಟ ಪೊಗಳಿರೆ
ಪುಷ್ಪಗುಚ್ಛವನೀಯುತ
ದಿಟ್ಟಿಯಾಗದ ತೆರದಿ ಕಾಡಿಗೆ
ಬೊಟ್ಟನಿಟ್ಟರು ಸೊಬಗಲಿ
ಗಟ್ಟಿದನಿಯಲಿ ಉಲಿದರೆಳೆಯುತ
ರಥವ ಕನ್ನಡ ಬಾಳಲಿ IIನಾಡII
ಕನ್ನಡದ ಸವಿ ಸವಿಯಲು
ಕನ್ನಡದ ಕೋಗಿಲೆಗಳುಲಿಯುವ
ಮಧುರಗಾನವ ಕೇಳಲು
ಬಾನಿನೆತ್ತರ ಹಾರಿಹೊಮ್ಮಿತು
ಕೆ೦ಪು ಧೂಳಿಯ ಮಳೆಯದೊ
ಉದಯರವಿಯನೆ ಮಬ್ಬುಗೊಳಿಸಿತು
ಸಾಹಿತಿಯ ನುಡಿ ಕಿಡಿಯದೊ IIನಾಡII
ಕನ್ನಡದ ನುಡಿ ಇ೦ಪಲಿ
ಎತ್ತರವ ಬಿತ್ತರಿಸೆ ಅರಳಿತು
ಕನ್ನಡದ ಧ್ವಜ ಸೊ೦ಪಲಿ
ಎತ್ತ ನೋಡಿದರತ್ತ ಕೋರೈ-
-ಸಿತದೊ ಕನ್ನಡ ಪೆ೦ಪಲಿ
ಕತ್ತಲಿನ ಜೊ೦ಪಿನಲು ಹಬ್ಬಿತು
ಸೆಳೆವ ಕನ್ನಡ ಕ೦ಪುಲಿ IIನಾಡII
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (6)