ತೆರೆಮರೆಯ ಬದುಕಲ್ಲವಿದು ತೆರೆದ ಪುಸ್ತಕದ ಹಾಳೆ

ಭಾವನೆಯ ಪುಂಜವಿದು ಅಲ್ಲ ಬರಿ ಪದಗಳಾ ಮಾಲೆ
ಮಬ್ಬಿನಲು ಕಾಣುವುದು ಜೀವನದ ಸತ್ಯ 
ಸಂಬಂಧಗಳ ನಡುವೆ ಸಮರಸದ ಲಾಸ್ಯ 
 
ಹುಡುಕುವರು ಅಲೆಯುವರು ಕಂಡರಿಯದ ಸ್ವತ್ತಿಗೆ
ಬಳಲುವರು ಬೇಯುವರು ಸ್ವಂತ ಗೋರಿಗೆ ಇಡುತಿಹರು ಇಟ್ಟಿಗೆ
ಆಸೆಗಳ ಅಮಲಿನಲಿ ಕಾಣುವರು ಅಂತ್ಯ
ಜೀವನದ ವಿಪರ್ಯಾಸ ಆದರು ಸತ್ಯ