ಈ ರಾತ್ರಿ ಎಂಬುದು
ಹಗಲೆಲ್ಲ ದುಡಿದು ಬಂದ
ಜೀವಕ್ಕೆ ದೇವರಿತ್ತ ವರ
ಈ ರಾತ್ರಿ ಎಂಬುದು
ಪ್ರಿಯತಮೆಯ ನೆನಪಲ್ಲಿ
ನಿದ್ದೆ ಬರದೆ ಒದ್ದಾಡುವ
ವಿರಹ ಪ್ರೇಮಿಯ ಸಂಕಟ
ಈ ರಾತ್ರಿ ಎಂಬುದು
ನೋವಿನಲ್ಲಿಯೇ ಸುಖದ
ಮೆಲಕು ಹಾಕುವ ಸೂಳೆಯ
ವ್ಯಾಪಾರ ವೇಳೆ !!
ಈ ರಾತ್ರಿ ಎಂಬುದು
ಪರೀಕ್ಷೆಯ ಟೆನ್ಶನ್ ನಲಿ
ವಿಧ್ಯಾರ್ಥಿ ಯೊಬ್ಬ ಸುಡುವ
ಸಿಗರೇಟ್ ನ ಹೊಗೆಯ ಹಂದಿರ
ಈ ರಾತ್ರಿ ಎಂಬುದು
ಯಾರೋ ಕಷ್ಟಪಟ್ಟು ( ? )
ದುಡಿದ ಹಣವನು
ಕದಿಯುವ ಕಳ್ಳನೊಬ್ಬನ ಕೈಚಳಕ !!
ಈ ರಾತ್ರಿ ಎಂಬುದು
ದುಖ: ಉಮ್ಮಳಿಸಿದರೂ
ತಡೆಹಿಡಿದುಕೊಂಡು ದಿಂಬು
ತೋಯಿಸುವ ಕೆಟ್ಟತ್ತೆ ಮನೆಯ
ಸೊಸೆಯ ವೇದನೆ
ಈ ರಾತ್ರಿ ಎಂಬುದು
ನನ್ನ ನೈಟ್ ಡ್ಯೂಟಿ ಗೆ ಹಾಕಿ
ಹೆಂಡತಿ ಪಕ್ಕದಲಿ ಸುಖ ವಾಗಿ
ನಿದ್ರಿಸುತಿರುವ S I ಗೆ
constableನ ಕೆಟ್ಟ ಬೈಗುಳ
ಈ ರಾತ್ರಿ ಎಂಬುದು
ಮದುವೆಯಾಗದೆ ಮೂರುತಿಂಗಳಾದ
ಹುಡುಗಿಯೊಬ್ಬಳು ವಿಷಕುಡಿದು
ಒದ್ದಾಡುವ ವಿಷಮ ಪರಿಸ್ತಿತಿ
ಈ ರಾತ್ರಿ ಎಂಬುದು
ನೋವ ಮರೆಯಲು
ಕುಡಿದ ಕುಡುಕನೊಬ್ಬನ
ವಾಂತಿಯ ನಿತ್ರಾಣ !!
ಈ ರಾತ್ರಿ ಎಂಬುದು
ನನ್ನ ಚಿಂತೆಯೇ ಇಲ್ಲದೇ
ಸುಖವಾಗಿ ನಿದ್ರಿಸುತಿರುವ
ಆ ಅ ....... ವ ....... ಳು !!
ಈ ರಾತ್ರಿ ಎಂಬುದು
ಅವಳ ನೆನಪಿನಲ್ಲಿಯೇ ಕಣ್ಣೀರು
ಹಾಕುತ ಸಿಗರೇಟ್
ಸುಡುವ ನಾ ........ ನು !!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!