ಗೆಳತಿ, ಹರಿದು ಹೋದ ಅಂಗಿಯ ಗುಂಡಿಯ ತರ ,
ಪ್ರೇಮ ತಿರಸ್ಕರಿಸಿ ಹೋದಾಗ ಆದ ನೋವಿಗೆ
ಕುಡಿದು , ಸಿಗರೇಟ್ ಸೇದಿ ದುಃಖ ಮರೆತೆ ಅಂತ ನಿರ್ಮಳವಾಗಿ
ನೋವಿನಲ್ಲೇ ಇರುವ ಜೀವಕ್ಕೆ ........ ,
ಒಂಬತ್ತು ತಿಂಗಳು ಹೊತ್ತು , ಹೆತ್ತು , ತುತ್ತುಣಿಸಿ
ಅಂಬೆಗಾಲಿಕ್ಕೂತ ಬಂದ ಮಗನ ಸಿಂಬಳ ತಗೆದೊಗೆದು ,
ಬಣ್ಣದ ಅಂಗಿ ಹಾಕಿ , ಹೊಟ್ಟೆ ತುಂಬಾ ತಿನ್ನಿಸಿ , ತಾನು
ಉಪವಾಸ ಇರುವ ತಾಯ್ಗರಳು ,
ಬೆಳೆದು ನಿಂತ ಮಗನ ಅಂಗಿಯಲ್ಲಿ ಸಿಗರೇಟಿನ ಕಮಟು ವಾಸನೆ
ಬಂದಾಗ ,
ಎದೆಯಲ್ಲಿ ಸಾವಿರ ಚೇಳುಗಳು ಕುಟುಕಿದಂತಾಗಿ
ಸಣ್ಣಗೆ ಕಣ್ಣಿರು ಸುರಿಸಿ ,
"ದೇವರೇ , ನನ್ನ ಆಯಸ್ಸು ಕೂಡಾ ಅವನಿಗೆ ಕೊಟ್ಟು ಬಿಡು "
ಅಂತುಲಿಯುವ ಅವಳೆದೆಯಾಳದ ನೋವು ಅವನಿಗೆ ಗೊತ್ತಾದ ದಿನ ,
ಜಿದ್ದಿಗೆ ಬಿದ್ದವನಂತೆ , ತನ್ನಡುಗಿಯ ನೆನಪು , ಯಾವತ್ತೋ ತಗೆಸಿದ ಸಿಟಿ ಬಸ್ ಟಿಕೆಟ್ಟನ್ನು
ಪರ್ಸ್ನಿಂದ ಕಿತ್ತೊಗೆದಂತೆ ಎಸೆದು ,
ದೆವ್ವದಂತೆ ದುಡಿದು, ಮೊದಲ ಸಂಬಳದಲ್ಲಿ
'ಅವ್ವ'ನಿಗೊಂದು ರೇಷ್ಮೆ ಸೀರೆ ತಂದು
ಕೈತುತ್ತು ತಿಂದು , ಚಾಪೆಯ ಮೇಲೆ ಗಡದ್ದಾಗಿ
ಗುರಕಿ ಹೊಡೆವ ಮಗನ ಕಂಡಾಗ ,
ಅಮ್ಮನ ಕಣ್ಣಲ್ಲಿ ಸಣ್ಣಗೆ ಆನಂದಬಾಷ್ಪ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!