ಸಹಜ ಸುಂದರ ಸೃಷ್ಟಿ ಮಂದಿರ
ಋತು ವಿಲಾಸವೋ ಬಂಧುರ
ಮನಿಸನಾಟವ ತಡೆಯಲಾರದೆ
ನಡುಗಿದೆ ಈ ಸೃಷ್ಟಿ ಮಂದಿರ

ರವಿ ಚಂದ್ರರ ಬೆಳ್ಳಿ ಬೆಳಕಿದೆ
ಜಲಲಧಾರೆಯ ನೊರೆಯಿದೆ
ಯಾವ ಶಕ್ತಿಯ ವಿಶ್ವ ರೂಪವೊ
ಪ್ರಾಣಿ ಸಂಕುಲ ನೆರೆದಿದೆ

ಗಗನ ದಾಟಿದೆ ಪಂಕ್ತಿ ಪಂಕ್ತಿಯ
ಮನವ ರುಚಿಸುವ ಪರ್ವತ
ತುಂಬಿ ಹೋಗಿದೆ ತರುಗಳಿಂದೆಲ್ಲವೀ ವನ
ತಂಪು ಗಾಳಿಯ ಸೂಸುತ

ಆಹಾ... ಎಂತಹ ಸುಂದರ ಈ ಪ್ರಕೃತಿಯು
ಆದರೆ...
ಧೂಮಕೇತುವಿನಂತೆ ಬಂದೆರಗುತಿದೆ ವಿಕೃತಿಯು

ಎಲ್ಲಿ ನೋಡಿದರಲ್ಲಿ ನಾಶವಾಗುತಿದೆ ಕಾಡು
ನದಿಗಳು ಬತ್ತಿ ಬರದಿಂದ ಬೇಸತ್ತಿದೆ ನಾಡು
ಅಂದು ನಮ್ಮವರು ಕಂಡ ಮಿಗಗಳಿಲ್ಲವಿಂದು
ಅಂದು ಕೇಳಿದ ಚಿಲಿಪಿಲಿ ಗಾನವಿಲ್ಲವಿಂದು
ಕಾಡನುಳಿಸಲು ಶ್ರಮಿಸಿ ಎಂದೆಂದು
ಜೀವನದರ್ಥ ಅಡಗಿದೆ ಇದರಲ್ಲಿಂದು

ಈ ಎಲ್ಲದರ ಕಾರಣಕರ್ತ ಇಲ್ಲೇ ಇಹನೆಂದು
ತಿಳಿವುದೆಲ್ಲ ನಮಗೆಂದು?
ತಿಳಿದರೂ ಅದನ್ನೇ ಮಾಡುವ ಈ ಮೂಡನ ಕೃತಿಗೆ ಕೊನೆಯೆಂದು?!!