ಮರೆಯಾಗಿ ಹೋದೆಯಾ ಮೌನದಿ
ನನ್ನ ಮನದ ಮಾತು ಕೇಳದೆ?
ನಿನ್ನ ಇರುವಿಕೆಗಾಗಿ ಕಾದ
ನನ್ನ ಒಲವಿನ ದಾರಿ ಕಾಣದೆ ?
ಸಾಗುವುದು ಹೇಗೆ ನಾಳೆಯ
ಅಗಮ್ಯ ಬಾಳಿನ ದಾರಿ?
ಇಣುಕುವುದೇನೋ ನಿನ್ನ ನೆನಪು
ಬಂಧನದ ಮೇರೆ ಮೀರಿ
ಪರಿಹರಿಸಲೋ ಪರಿತಪಿಸಲೋ
ಈ ಧ್ವಂಧ್ವವ ನಾ ತಿಳಿಯಲಾರೆ
ನೀನಾಗಿದ್ದೆ ಸದಾ ಕಾಲಕ್ಕು
ನನ್ನ ಕನಸಿನ ಅಮೃತಧಾರೆ !
ಪ್ರತಿಕ್ರಿಯೆ (1)