ರೊಚ್ಚಿಗೆದ್ದಿದೆ ಕಡಲು ಭೂಮಿ ಸುಮ್ಮನಿರದೆ

ಕಂಪಿಸುವ ಕಂಪನದೊಂದಿಗೆ ಆರ್ಭಟಿಸಿದೆ

ಸುನಾಮಿ ರಕ್ಕಸ ಅಲೆಗಳೊಂದಿಗೆ ನರ್ತಿಸಿದೆ

ಕಡಲು ತನ್ನ ಗಡಿರೇಖೆ ಮೀರಿ ಆಕ್ರಮಿಸಿದೆ

 

ದೈತ್ಯಾಕಾರದ ಸುನಾಮಿ ಅಲೆಗಳ ರುದ್ರ

ನರ್ತನದೊಂದಿಗೆ ಜೀವ ಪ್ರಳಯ ಮಾಡಿದೆ

ಲೆಕ್ಕವಿಡದ ಊರು ಕೇರಿ ಪಟ್ಟಣ ಹೊಕ್ಕು ಕ್ಷಣದ

ಕಾಲದೊಳಗೆ ವಿಷ್ಮಯ ಪಡುವಂತೆ ನುಂಗಿ ಹಾಕಿದೆ

 

ಕಡಲ ಒಡಲ ಸೇರಿದ ಜೀವ ಜೀವ ರಾಶಿ

ಪ್ರಾಣ ಕಡಲಾಳದೊಳಗೆ ಸೇರಿತು ಹೆಣದ ರಾಶಿ ರಾಶಿಯಾಗಿ

ಭೂತಾಯಿಯ ಮಡಿಲ ಒಡಲಲ್ಲಿ

ಹೆಣ ಕಂಡಲ್ಲೇ ಸ್ಮಶಾನ ಸೃಷ್ಠಿಸಿತು ಸುನಾಮಿ ಅಲೆ

 

ಕಣ್ಣೀರಿನ ಗೋಳಿನ ಕಥೆ ಮುಗಿಲು ಮುಟ್ಟಿದೆ

ರಕ್ತ ಸಂಬಂಧಿಕರ ಕಳೆದುಕೊಂಡ ಭಯದ

ಭೀತಿಯೊಳಗೆ ಹಬ್ಬುತ್ತಿದೆ ಸಂಕ್ರಾಮಿಕ ರೋಗ

ನರಳಾಟದ ದು:ಖದ ಮಡುವಾಗಿದೆ ಸುನಾಮಿ ಜಾಗ

 

ಹಾಹಾಕಾರದಲ್ಲಿ ಅನ್ನಕ್ಕಾಗಿ ಹಾತೊರೆಯುತ್ತಾಯಿದೆ ಜೀವ

ಕಣ್ಣೀರಿನ ಕೂಳಿಗಾಗಿ ಮಾನವನ ಜೀವ ಗೋಲಾಡುತ್ತಿದೆ

ಮಾನವನ ಅಹಂ ಭಾವನೆಯ ಚಿತ್ತವಿಚಿತ್ರಣ ಇದಾಗಿದೆ

ಪ್ರಾಕೃತಿಯ ಒಡಲ ಸಂಕಷ್ಟದ ಪ್ರತಿಫಲ ಇದಾಗಿದೆ

                                                     ಹೆಚ್. ವಿರುಪಾಕ್ಷಪ್ಪ ತಾವರಗೊಂದಿ.