ಸದ್ದು ಮಾಡದೆ ಮನವ ಹೊಕ್ಕಿ 

ಮಾತುಗಳಿಂದ ಮನಸು ಆಳಿ

ನಿದ್ದೆಯಲ್ಲೂ ಸನಿಹ ಬಂದು 

ಬೇಡವೆಂದರೂ ಅಪ್ಪಿಕೊಂಡು 

ಕಾಡುವ ನೆಪಗಳೇ ಈ ನೆನಪುಗಳು 

 

ಅಳುವಾಗ ಬರುವ ಕಣ್ಣೀರಿಗೆ 

ನಗುವ ನೀಡಿ 

ನಲಿದಾಡುವಾಗ ಪನ್ನೀರೆಂದು ಮರುಕಳಿಸಿ 

ಹಗುರ ಹೃದಯವ ಭಾರ ಮಾಡಿ 

ಮನದ ತುಂಬ ಹಬ್ಬಿಕೊಂಡು 

ಕಾಡುವ ನೆಪಗಳೇ ಈ ನೆನಪುಗಳು 

 

ಹೊತ್ತು ಗೊತ್ತಿಲ್ಲದೇ ಭೇಟಿ ನೋಡಿ 

ಮನಕೆ ಪ್ರೀತಿಯ ಪಾಠ ಹೇಳಿ 

ಒಬ್ಬಂಟಿ ಇದ್ದರು ಜಗವ ಸುತ್ತಿ 

ಕೋಟಿ ಪದಗಳ ಸುನಾಮಿ ಎಬ್ಬಿಸಿ 

ಕಾಡುವ ನೆಪಗಳೇ ಈ ನೆನಪುಗಳು 

 

ಕೆಲವು ಬಾರಿ ಹುಚ್ಚು ಹಿಡಿಸಿ 

ಹಲವು  ಸಿಹಿ ಕಹಿ ಮುದ್ದು ಕುಡಿಸಿ 

ಜೀವ ಹಿಂಡುವ ಮಾತು ನೆನೆಸಿ 

ಹೊಸ ಆಸೆ ಹುಟ್ಟುವ ಮೋಡಿ ಮಾಡಿಸಿ 

ಕಾಡುವ ನೆಪಗಳೇ ಈ ನೆನಪುಗಳು