ಮಾರ್ಚ್ ತಿಂಗಳ ಎಲ್ಲ ವೀಕೆಂಡಲ್ಲೂ ಊರಿಗೆ ಹೋಗಿದ್ದೆ. ಊರಲ್ಲಿಮಳೆಗಾಗಿ ಕಾಯ್ತಿದ್ರು. ಈ ಸಲನಾದ್ರೂ ಚೆನ್ನಾಗಿ ಮಳೆ ಬಂದು ಕಾಫಿ ಚೆನ್ನಾಗಿ ಹೂ ಬಿಡ್ಲಿ ಅಂತಿದ್ರು. ನಾನೂ ಹೋದಾಗಲೆಲ್ಲ ಮಳೆಗೆ ಕಾಯ್ತಿದ್ದೆ, ಜೊತೆಗೆ ಕಾಫಿಯ ಹೂವಿಗೆ ಸಹ. ಹೂವಿನಿದ ತುಂಬಿ ಕಂಗೊಳಿಸುವ ತೋಟವನ್ನ ನೋಡೋದೇ ಕಣ್ಣಿಗೆ ಹಬ್ಬ, ಎಲ್ಲಿ ಕಣ್ಣು ಹಾಯಿಸಿದರೂ ಬಿಳೀ ಹೂಗಳದ್ದೇ ರಾಶಿ, ಅಲ್ಲದೆ ಆ ಹೂವಿನ ಘಮಲು, ಆಹಾ ಏನು ಪರಿಮಳ, ದಿನಾ ಪೂರ್ತಿ ಅಲ್ಲೇ ಕುಳಿತಿರೋಣ ಎಂದನ್ನಿಸುತ್ತದೆ. ೨ ವರ್ಷ ಆ ಸೌಭಾಗ್ಯ ಸಿಕ್ಕಿರ್ಲಿಲ್ಲ ಯಾಕಂದ್ರೆ ಹೂವು ಆಗಿದ್ದು ವಾರದ ಮಧ್ಯದಲ್ಲಿ :(. ವೀಕೆಂಡ್ ಬರೋ ಹೊತ್ತಿಗೆ ಎಲ್ಲ ಹೂವು ಉದುರಿಹೋಗಿರ್ತಿತ್ತು.
ಒಂದಿನ ಮೋಡ ಆದ ಹಾಗೆ ಆಗ್ತಿತ್ತು, ದೂರದ ಗಿರಿಯಲ್ಲಿ ಕಪ್ಪನೆಯ ಮೋಡ, ಸ್ವಲ್ಪ ಹೊತ್ತಾದ ಮೇಲೆ ಮಳೆ. ಇತ್ತ ಕಡೆ ಗಾಳಿ ಬೀಸುತ್ತಿತ್ತು, ಮಳೆಯೂ ಬರುತ್ತಿರುವ ಹಾಗನ್ನಿಸುತ್ತಿತ್ತು. ಎಲ್ಲೋ ದೂರದ ಆಸೆ, ಇನ್ನೇನು ಕಾಲು ಘಂಟೆಯಲ್ಲಿ ಇಲ್ಲಿಗೆ ಬರತ್ತೆ, ಹೋಗಿ ನೆನೆಯಬಹುದು ಅಂತ. ಆಮೇಲೆ ಮಳೆ ಬಂದ್ರೆ ೩-೪ ದಿನ ಆದ್ಮೇಲೆ ಚಿಗುರು ಬಿಟ್ಟು ಹೂವು ಆಗೋ ಹೊತ್ತಿಗೆ ೧ ವಾರ ಆಗತ್ತೆ, ಮುಂದಿನ ವಾರ ಬರಬಹುದು ಅಂತ ದೂರದ ಆಸೆ. ದೂರದಲ್ಲಿ ಜೋರಾಗಿ ಸುರಿಯುತ್ತಿದ್ದ ಮಳೆ ಗಾಳಿ ಬೀಸುತ್ತಿದ್ದಂತೆ ಇತ್ತ ಕಡೆ ಬರ್ತಾ ಇತ್ತು. ಅಲ್ಲೇ ಕಣದಲ್ಲಿ ನಿಂತು ನೋಡುತ್ತಿದ್ದ ನನಗೆ, ಪಕ್ಕದ ಊರಲ್ಲಿ ಹನಿಗಳು ಬಿದ್ದಾಗ ಆದ ಸಂತಸ ಅಷ್ಟಿಷ್ಟಲ್ಲ. ಆದರೆ ಸ್ವಲ್ಪ ಹೊತ್ತಾದ ಮೇಲೆ ಅಲ್ಲಿ ಬೀಳುವುದೂ ಕಡಿಮೆಯಾಯ್ತು. ಕಾಯುತ್ತಿದ್ದ ನಾನು ಸಪ್ಪೆ ಮೊರೆ ಹಾಕಿಕೊಂಡು ಮನೆ ಒಳಗೆ ಹೋದೆ.
ಬೆಂಗಳೂರಿಗೆ ಬಂದ ಮಾರನೇ ದಿನ ಅಮ್ಮ ಫೋನ್ ಮಾಡಿ ಮಳೆ ಬಂತು ಅಂದಾಗ ಮೊದಲಿಗೆ ಸ್ವಲ್ಪ ದುಃಖ ಆದರೆ ಮರುಕ್ಷಣವೇ ಖುಷಿ. ಮುಂದಿನ ವಾರ ಹೇಗಿದ್ದರೂ ಯುಗಾದಿಗೆ ಊರಿಗೆ ಹೋಗಬೇಕು ಆಗ ಇಡೀ ತೋಟ ಸುತ್ತಾಡಿ ಅಲ್ಲಿಯ ಸೊಬಗನ್ನು, ಜೊತೆಗೆ ಸುವಾಸನೆಯನ್ನೂ ಸವಿಯಬಹುದಲ್ಲ ಎಂದೆನಿಸಿತು.
ಯಾವಾಗ ಶುಕ್ರವಾರ ಆಗತ್ತೋ ಅಂತ ಕಾಯ್ತಿದ್ದೆ. ಅಂತೂ ಬಂತು, ರಾತ್ರಿ ಹೊರಟು ಬೆಳಗ್ಗೆ ಚಿಕ್ಕಮಗಳೂರು ತಲುಪಿ ಊರಿನ ಬಸ್ ಹತ್ತಿದಾಗ ತಲೆಯಲ್ಲಿದ್ದದ್ದು ಒಂದೇ ಯೋಚನೆ, ಹೂವು ಹೂವು ಹೂವು. ಅರ್ಧ ಘಂಟೆ ಪ್ರಯಾಣದ ನಂತರ ಊರು ತಲುಪಿ ಬಸ್ಸಿನಿಂದ ಇಳಿದು ತೋಟದ ಹಾದಿಯಲ್ಲಿ ಮನೆಯ ಕಡೆ ಹೆಜ್ಜೆ ಹಾಕುವಾಗ ಸ್ವರ್ಗದಲ್ಲಿದ್ದೆನೇನೋ ಅನ್ನೋ ಅನುಭವ.
ಕಾದು ಕೆಂಪಾಗಿದ್ದ ಇಳೆಯನ್ನು
ಆಗಸವು ವರ್ಷಧಾರೆಯ ಸುರಿಸಿ
ಹನಿಯಿಂದ ಚುಂಬಿಸಿ
ಎಲ್ಲೆಡೆ ಹಸಿರನ್ನು ಪಸರಿಸಿದೆ
ಆ ದಿನ ಪೂರ್ತಿ ನಾನು ನನ್ನ ಬಹುತೇಕ ಸಮಯವನ್ನು ತೋಟದಲ್ಲೇ ಕಳೆದಿದ್ದೆ.
.................................................
ಯುಗಾದಿಯ ದಿನ ನನ್ನ ಕೆಲಸ ಮುಗಿಸಿ, ಅಂದರೆ ತೋಟಕ್ಕೆ ಹೋಗಿ ಮಾವಿನ ಎಲೆ, ಹಲಸಿನ ಎಲೆ ತಂದು ತೋರಣ ಮಾಡಿ ಕಟ್ಟಿದ್ದಾಯ್ತು. ಇನ್ನೇನಿದ್ದರೂ ದೇವರಿಗೆ ಆರತಿ ಮಾಡಿ ಹೊಟ್ಟೆಗೆ ಕೆಲಸ. ಅದಕ್ಕೆ ಇನ್ನೂ ಸಮಯವಿದ್ದುದ್ದರಿಂದ ಅವತ್ತಿನ ಪೇಪರ್ ತಂದು ಅಂಗಳದಲ್ಲಿ ಕುಳಿತೆ. ಬಿಸಿಲು ತುಂಬಾ ಇತ್ತು. ಪೇಪರ್ ಹರಡಿಕೊಂಡು ಏನೋ ಓದುತ್ತಿದ್ದೆ, ಸಡನ್ನಾಗಿ ಮೋತಿ (ಮನೆಯ ನಾಯಿ) ಓಡಿಬಂದು ನನ್ನನ್ನ ನೋಡಿ ಬಾಲ ಅಲ್ಲಾಡಿಸಿ ಲಾನಲ್ಲಿದ್ದ ಹೂವಿನ ಪಾಟಿನ ಹತ್ತಿರ ಹೋಗಿ ನೀರಿಗೆ ತನ್ನ ನಾಲಿಗೆ ಚಾಚಿ ನೀರನ್ನು ಹೀರತೊಡಗಿತು. ಅಲ್ಲಿ ಅದಕ್ಕೆ ಇದ್ದ ಒಂದೇ ಒಂದು ನೀರಿನ ಮೂಲ ಅಂದರೆ ಅದೇ :( ನೀರುಕುಡಿದು ನನ್ನ ಪಕ್ಕ ಬಂದು ಮಲಗಿತು.
ಹಾಗೆ ಸ್ವಲ್ಪ ಹೊತ್ತು ಅಲ್ಲೇ ಕುಳಿತಿದ್ದೆ, ಆಗ ಪಾರಿವಾಳವೊಂದು ಬಂದು ಪಾಟಿನಹತ್ತಿರಕುಳಿತುಅತ್ತಇತ್ತಹಲವಾರುಬಾರಿನೋಡಿಆಮೇಲೆನೀರಿಗೆತನ್ನಕೊಕ್ಕನ್ನುಹಾಕಿತು. ಮಾಡುವುದಕ್ಕೆಬೇರೆಕೆಲಸಇರಲಿಲ್ಲವಾದುದರಿಂದ
ಅಲ್ಲೇ ಕುಳಿತು ಇನ್ನೂ ಯಾವ್ಯಾವ ಹಕ್ಕಿಗಳು ಬರಬಹುದು ಅಂತ ಕಾಯ್ತಿದ್ದೆ. ಕಾಗೆ, ಮಡಿವಾಳ ಹಕ್ಕಿ, ನನಗೆ ಹೆಸರು ಗೊತ್ತಿಲ್ಲದ ಹಲವು ಹಕ್ಕಿಗಳು ಬಂದು ನನ್ನನ್ನು ನೋಡಿ, ಕೆಳಗೆಮಲಗಿದ್ದ ಮೋತಿಯನ್ನೊಮ್ಮೆನೋಡಿಯಾರೂತೊಂದರೆಮಾಡುವುದಿಲ್ಲಎಂದರಿತುನೀರನ್ನುಕುಡಿದುಹೋಗುತ್ತಿದ್ದವು. ಲಾನ್ಮಾಡಿಪಾಟಲ್ಲಿನೀರುಇಟ್ಟದ್ದುಹೀಗಾದರೂಉಪಯೋಗಕ್ಕೆಬಂದಿತ್ತು.
..............................................................................
ರಾತ್ರಿಹೊರಟುಬೆಳಗ್ಗೆಬೆಂಗಳೂರಿಗೆಬಂದೆ, ನಮ್ಮಮನೆಯ (ಬೆಂಗಳೂರಿನಲ್ಲಿಯಬಾಡಿಗೆಮನೆ) ವರಾಂಡಅಗಲವಿತ್ತು, ಆಫೀಸಿಗೆಹೊರಡುವಮುನ್ನಒಂದುಪ್ಲಾಸ್ಟಿಕ್ಡಬ್ಬದಲ್ಲಿನೀರನ್ನುಇಟ್ಟುಹೋಗಿದ್ದೆ. ಕೆಲಸ ಮುಗಿಸಿಸಂಜೆವಾಪಸ್ ಬರೋ ಹೊತ್ತಿಗೆಕಾಲುಭಾಗನೀರುಖಾಲಿಯಾಗಿತ್ತು, ಅಬ್ಬಯಾವ್ದೋಹಕ್ಕಿಗಳುಕುಡಿದಿರಬಹುದುಅಂತಅಂದ್ಕೊಂಡೆ.
ಸಂಜೆಬಂದಮೀಟರ್, 'ಏನಪ್ಪಾನೀರುಇಟ್ಟಿದೀಯ' .
'ಹ್ಞೂ, ಬಾಯಾರಿಕೆಆದಾಗಹೀಗೆಯಾವ್ದಾದ್ರೂಹಕ್ಕಿಗಳುಕುಡಿಯಲಿಅಂತ'
'ಅದೇನುಹಕ್ಕಿಕುಡಿದುಖಾಲಿಯಾಗಿರೋದುಅಂದ್ಕೊಂಡ್ಯ?'
'ಹ್ಞೂ, ಮತ್ತೆಇನ್ಹೇಗೆಖಾಲಿಯಾಗತ್ತೆ?'
'ಬಿಸಿಲಿಗೆಡಬ್ಬಕಾದು ನೀರುಖಾಲಿಯಾಗಿರೋದು'
ನಂಗೆಬೇಜಾರಾಯ್ತು. ಛೆ, ಹೀಗಾಯ್ತಲ್ಲಅಂತ. ಆದರೂಆವಾರಪೂರ್ತಿನೀರುತುಂಬಿಸಿಹೋಗ್ತಿದ್ದೆ, ಸಂಜೆಹೊತ್ತಿಗೆಕಾಲುಭಾಗಖಾಲಿಯಾಗಿರ್ತಿತ್ತು. ಆದ್ರೆಹೇಗೆಅನ್ನೋದುಇನ್ನೂನಿಗೂಢವಾಗಿತ್ತು. ಆಗಲಿವೀಕೆಂಡ್ನಲ್ಲಿಚೆಕ್ಮಾಡೋಣಅಂದ್ಕೊಂಡೆ.
ಶನಿವಾರನೀರುಹಾಕಿಚಾವಡಿಯಲ್ಲಿಬಂದುಪೇಪರ್ಓದುತ್ತಾಅಲ್ಲಿಆಗಾಗನೋಡುತ್ತಾಕುಳಿತೆ. ಅರ್ಧಘಂಟೆಆದರೂಯಾವುದರಸುಳಿವಿರಲಿಲ್ಲ. ಮೀಟರ್ಹೇಳಿದ್ದೇಸರಿಅಂದ್ಕೊಂಡೆ. ಇನ್ನುಅಲ್ಲಿಟ್ಟುಪ್ರಯೋಜನವಿಲ್ಲ, ಸಂಜೆಅದನ್ನಎಸೆದುಬಿಡೋಣಅಂದ್ಕೊಂಡೆ.
ಒಳಗೆಹೋಗಿಕಾಫಿಮಾಡ್ಕೊಂಡುಬಂದುಮತ್ತೆಪೇಪರ್ಓದ್ತಾಕೂತೆ. ಹಾಗೆಅತ್ತಕಡೆಕಣ್ಣುಹಾಯಿಸಿದೆ, ಅಳಿಲೊಂದುಬಂದುಡಬ್ಬನಆಕಡೆಈಕಡೆಮೂಸಿ, ಒಳಗೆನೀರಿರುವುದನ್ನುನೋಡಿಕುಡಿದುಓಡಿಹೋಯ್ತು. ಅಬ್ಬ, ಆಗಸಮಾಧಾನವಾಯ್ತು. ಆಮೇಲೆಆಗಾಗಕಾಗೆ, ಪಾರಿವಾಳಗಳುಬಂದುನೀರುಕುಡಿದುಹೋಗುತ್ತಿದ್ದವು.
ಅಂದಿನಿಂದ ಡಬ್ಬದಲ್ಲಿನೀರು ತುಂಬಿ ಆಫೀಸಿಗೆ ಹೊರಡುವದಾಗಿದೆ.
ಪ್ರತಿಕ್ರಿಯೆ (6)