ಅಂದು ನನಗೆ ಮುಸ್ಸಂಜೆಯ ನಿದ್ದೆ ,
ಸುತ್ತಲ ಸದ್ದನು ಕೇಳಿ ನಾ ಎದ್ದೆ,
ಎದ್ದು ನಿನ್ದು ನೋಡಿದೊಡೆ ಮಾಯವಾಯ್ತು ನಿದ್ದೆ......
ಮಿನು ಮಿನುಗಿ ಮಿನು ಮಿನುಗಿ ಹೊಗುತಿದ್ದ ಆಕಾಶ ದೀಪ,
ಖುಶಿಯಾಗುತಿತ್ತು ನೋಡಲದರ ಕೋಪ......
ಪಟ ಪಟನೆ ಪಟ ಪಟನೆ ಕುಣಿಯುತಿದ್ದ ಕಲ್ಲುಗಳಾ ಕುಣಿತ,
ಹೆಚ್ಚಿಸುತಿತ್ತು ನನ್ನ ಹೃದಯದಾ ಮಿಡಿತ,
ಕುಣಿಯು ಬಾ ಕುನಿಯು ಬಾ ನನ್ನೊಡನೆ ಎನುತ.....
ತಣ್ಣನೆಯ ತಂಗಾಳಿ ತನುವ ತಣಿಸಿ ತಣಿಸಿ,
ಪಿಸು ಪಿಸು, ಪಿಸು ಪಿಸು, ಎಂದು ಪಿಸುಗುಟ್ಟಿ ಹೇಳುತಿತ್ತು......
ನಾ ಇಳೆಯ ತಣಿಸಲು ಬಂದೆ,
ಹಸಿರ ನಗಿಸಲು ಬಂದೆ,
ಉಸಿರ ನೀಡಲು ಬಂದೆ,
ಹಸಿವ ತೀರಲು ಬಂದೆ,
ನಿನ್ನಿಂದ ಈ ಕವನ ಬರೆಸಲು ಬಂದೆ,
ಎಂದೆನುತ ಎಂದೆನುತ ಮಾಯವಾಯ್ತು
ಅಂದಿನಾ ಮಳೆ.....................
--- ಚೇತನ್.ಟಿ.ಕೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)