ಏನೆಂದು ಬರೆಯಲಿ ಕವನದಲಿ 

ಪದಗಳು ಸಾಲಾಗಿ ಬಂದಿವೆ 

ಪ್ರಾಸಗಳು ನಾ ಮುಂದು ಎಂದಿವೆ 

ನೆನಪುಗಳು ಅರಸನಾಗಿ ಆಳಿವೆ 

ಭಾವನೆಗಳು ಹಬ್ಬ ಆಚರಿಸಿವೆ 

ಮೌನ ಹೃದಯಕೆ ಅಂಟಿಕೊಂಡಿದೆ 

ನಗುವು ಅಕ್ಷರಕೆ  ಪಾಠ  ಹೇಳಿದೆ 

ಆಸೆಯು ಕಲಾಕುಂಚದಲಿ ಅರಳಿದೆ 

ಮನಸಿನ ಪುಟಕೆ ಖುಷಿಯಾಗಿದೆ