ಕತ್ತಲಲ್ಲಿ  ನಾ ಕುಳಿತು ,
       ಆ ಇರುಳನ್ನೇ  ಕುರಿತು ,
ಬರೆದೆನೊಂದು ಕವಿತೆ ಇಲ್ಲೀ.......

 

ಬೆಳದಿಂಗಳಾ  ಬೆಳಕು ಭೂಮಿಯನ್ನು ತಬ್ಬಿರಲು,
ಹಗಲಂತೆ ಕಾಣುತಿದೆ ಅಂದಿನಾ  ಇರುಳು ,


ಮತ್ತೆ ರವಿ ಬಂದನೆಂದು ಕತ್ತಲೋಡಿಬರಲು,
ಅದರ ಭಯವ ಕಂಡು ಕವಿಯ ಮನವು ಕರಗಲು,


ಮನೆಯ ಜಾಗ ಬಿಟ್ಟು ಕೊಟ್ಟ ಕತ್ತಲವಿತು ಕೂರಲು,
ಅದರ ಜೊತೆಯೇ ಕಾಲ ಕಳೆದ ಮತ್ತೆ ರವಿಯು ಬರುವವರೆಗೂ.....