ಮಲಗಿರುವನು ಬಿಳಿಯ ಚಂದಿರ | ಎಳೆಯಲೆಗಳೇ ಬೞಿಗೆ ಬರದಿರಿ |
ಎಲೆಯಿಂದ ಹನಿಯುವ ಹನಿಗಳ ನಲುಗಲು | ಕೊಡದಿರಿ |
ಎದೆಯಿಂದ ಜಿನುಗುವ ಒಱತೆಯ ಒಣಗಲು | ಬಿಡದಿರಿ ||
ಒಡಲಿನೊಳ್ ಒಱೆವ ಒಱತೆಯ | ಮನದ ಮಮತೆಯ ಮುಡಿಪಿನ |
ಜೇನುಲಿಗಳ ಉಲಿವ ಉಲಿಕೆಯ | ಅಮೃತವ ಸುರಿವ ತೊದಲ್ಗಳ |
ಬಿಡದಂತೆ ಕಾಡುವ ಮೋಹದ ಒಸರನ್ನು | ಕಾಯ್ವೆನು |
ಎಡೆಬಿಡದೆ ಉರಿಯುವ ಸೊಡರನ್ನು ಆಱಲು | ಈಯೆನು ||
ಮಲಗಿರುವನು ಎಳೆಯ ಚಂದಿರ | ಎಳೆಯಲೆಗಳೇ ಬೞಿಗೆ ಬರದಿರಿ |
ಎಲೆಯಿಂದ ಹನಿಯುವ ಹನಿಗಳ ನಲುಗಲು | ಈಯೆನು |
ಎದೆಯಿಂದ ಜಿನುಗುವ ಒಱತೆಯ ಒಣಗದೋಲ್ | ಕಾಯ್ವೆನು ||
ಮೆಲ್ಲನೊಡೆಯುವ ಕಂಗಳ | ಮೆತ್ತನೆಯ ಹಾಲ್ಗಲ್ಲದ |
ಮುದದಿಂದ ನಗೆಯನ್ನು ಬೀರುವ | ಕುಣಿದಾಡಿ ತೊನೆವ ಹಸುಕಂದನ |
ಬಿಡದಂತೆ ಕಾಡುವ ಮೋಹದ ಒಸರನ್ನು | ಕಾಯ್ವೆನು |
ಎಡೆಬಿಡದೆ ಉರಿಯುವ ಸೊಡರನ್ನು ಆಱಲು | ಈಯೆನು ||
ಮಲಗಿರುವನು ಎಳೆಯ ಚಂದಿರ | ಬೀಸಲೆಗಳೇ ಬೞಿಗೆ ಬರದಿರಿ |
ಎಲೆಯಿಂದ ಹನಿಯುವ ಹನಿಗಳ ನಲುಗಲು | ಈಯೆನು |
ಎದೆಯಿಂದ ಜಿನುಗುವ ಒಱತೆಯ ಒಣಗದೋಲ್ | ಕಾಯ್ವೆನು ||
ಪ್ರತಿಕ್ರಿಯೆ (2)