ಉಸಿರಾಡುವ ಈ ದೇಹ
ದೇಹ ಮೆಟ್ಟುವ ಈ ನೆಲ
ನೆಲದ ಮೆಲೆ ಬೆಳೆಯುವ ಫಲ
ಫಲದಿಂದ ಬರುವ ಈ ಬಲ
ಬಲದಿಂದ ಹೇಳಿದ ಪದ
ಪದಗಳಿಂದ ನುಡಿ ಹೊರಬರುವ
ಕನ್ನಡ ಕನ್ನಡ ಕನ್ನಡ
ಮಲನಾಡಿನ ತಂಪು ನಿಡುವ
ಬಯಲಸಿಮೆಯ ಬಿಸಿ ಇರುವ
ತುಂಗ ಭದ್ರ ಕಾವೇರಿ ನೆಲಿಸಿದ
ನಾಡು ನಮ್ಮದು, ತಾಯ್ನಾಡು ನನ್ನದು
ಮರುಹುಟ್ಟುವುದಾದರೆ ನಾನು
ಹುಲ್ಲಾದರೂ ಸಾಕು
ಬಯಸುವೆ ನಾನೆಂದು
ಈ ನೆಲ, ಈ ಜಲ, ಈ ತಾಣ
ಕರ್ನಾಟಕ ಕರ್ನಾಟಕ ಕರ್ನಾಟಕ
ವೀರರು ಇರಲು, ಹೇಡಿಗಳು ಇಹರು!
ಪ್ರೀತಿಸಲು ಇರಲು, ದ್ವೆಶಿಸುವರು ಇಹರು!
ನುಡಿದಾಡಿ ಬೆಳೆಸುವರಿಹರು!
ಬೆರಸಿ ಅಳಿಸುವರಿಹರು!!!
ನಾನಿರುವರೆಗು ಕನ್ನಡ,
ಎಂದ್ ಹೇಳಿದರೆ ಸಾಕು ಕನ್ನಡಿಗರು
ಉಳಿಯುವುದು ಸದಾ ನಮ್ಮ ನಾಡು ನಮ್ಮದು.
ಜೈ ಕರ್ನಾಟಕ ಮಾತೆ
ಪ್ರತಿಕ್ರಿಯೆ (3)