ಅವನೊಬ್ಬನಿದ್ದ ಬದುಕನ್ನು ಪ್ರೀತಿಸಲು ಕಲಿಸಲು...

  ಅತ್ತಾಗ ಕಣ್ಣೋರೆಸಿ ಅಳುವನ್ನು ಮರೆಸಲು...

  ನಕ್ಕಾಗ ನಗಿಸಿ ನಗುವನ್ನು ಕಲಿಸಲು...

 

  ಅವನೊಬ್ಬನಿದ್ದ ಪ್ರತಿ ಹಂತದಲ್ಲಿ ಧೈರ್ಯ ತುಂಬಲು...

  ಕಳೆದುಕೊಂಡ ಕನಸನ್ನು ಹುಡುಕಿಕೊಡಲು...

  ಹಟ ಮಾಡಿದಾಗ ಹುಸಿಕೋಪ ತೋರಲು

 

  ಅವನೊಬ್ಬನಿದ್ದ ಮದುವೆ ದಿನ ದರ್ಪ ತೋರಿಸಲು

  ಮಗಳ ಬರುವಿಕೆಗೆ ಚಾತಕ ಪಕ್ಷಿಯಂತೆ ಕಾಯಲು...

  ಮತ್ತೆ ಮತ್ತೆ ಅವನ ಮಡಿಲಲ್ಲಿ ಮಲಗುವ ಮಗುವಾಗಬೇಕು ನಾ...

  ಅವನಂತ ಅಪ್ಪನ ಪ್ರೀತಿ ಬಾಳಪುಟದಲ್ಲಿ ಅಚ್ಚಳಿಯದೇ ಇರಬೇಕು