ಬದುಕೆಂದರೆ ಹೂವಿನ ಹಾಸಿಗೆಯಲ್ಲ...
ನಂಬಿದವರಿಂದಲೇ ಮೋಸ ಹೋಗುತ್ತೇವೆ
ಬಳಿಯಲ್ಲಿರುವ ಹೂ ಗುಲಾಬಿಯಾಗಿದ್ದರೂ
ಚುಚ್ಚುವ ಮುಳ್ಳನ್ನು ಮರೆತರೇ ನೋವು ಉಡುಗೊರೆ

ಆದರ್ಶ ಮಾತನಾಡುವವರ ಬಾಯಿಯೂ ತೊಡರುವುದು...
ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವ ಜಾಯಮಾನದವರು
ಬಗಲಲ್ಲೇ ಹುಳುಕಿದ್ದರೂ ಇನ್ನೊಬ್ಬರ ಗಾಯವನ್ನು ತರಚುವವರು

ನಗುವುದೋ ಅಳುವುದೋ ತಿಳಿಯದು
ವಿಪರ್ಯಾಸವೆಂದರೆ ಇದೇ ಇರಬೇಕು!