ಸುಮ್ಮನೆ  ನಾನು ನಿಂತಿರುವಾಗ


 

ಗೆಳೆಯ ನೀನು ಬಳಿ ಬಂದೆ


 

ಸದ್ದು ಮಾಡದೆ ಮೆಲ್ಲ ಮೆಲ್ಲನೆ


 

ನನ್ನ ನೆರಳಲಿ ನಲಿದಾಡಿದೆ


 

ನಾನು ದೂರ ಓಡಿ ಹೋದರೆ


 

ನೀನೆಲ್ಲೊ ಮರೆಯಾದೆ


 

ಬಾರೊ ಬೇಗ ನನ್ನ ನಲ್ಲ


 

ಈ ಹೃದಯ ನಿನ್ನ ಪ್ರೀತಿಸಿದೆ