ದೇಶ ಸೇವೆಗೆ ಭಾರತ ಮಾತೆಗೆ

ರಕ್ಷಣೆ ನೀಡಲು ಹೊರಟ ಯೋಧ

ತಾಯಿಗೆ ನಮಿಸಿ ಸತಿಗೆ ಕ್ಷಮಿಸಿ

ಎದೆಗುಂಡಿಗೆ ನೀಡಲು ಸಿದ್ಧನಾದ

ಬಾಂಧವ್ಯ ಅಗಲಿಕೆಗೆ ದು:ಖವಿಲ್ಲ

ಭಾರತಾಂಬೆಯ ಮಡಿಲಲ್ಲಿ ಸುಖವೆಲ್ಲ

ಶತ್ರುಗಳ ಸರ್ವನಾಶವೇ ನನ್ನ ಗುರಿ

ಅದು ದೇಶ ರಕ್ಷಣೆಗೆ ಒಂದು ಗರಿ

ಚಿಂತಿಸದೆ ಮುನ್ನಡೆದ ಧೀರ

ದೇಶ ಸೇವೆಯೇ ಈಶ ಸೇವೆಯೆಂದ ವೀರ