ಮುದ್ದು ಮುದ್ದು ಮೆಚ್ಹುಗೆಯ ಮಾತನಾಡಿ
ಮನಸಿಗೆ ಮುದವ ನೀಡುವಳು .
ಮುಗ್ಹದತೆಯಲ್ಲಿ ಮನವ ಮನಸಿಂದೆಳೆದು
ಮನಸಲಿ ಮನೆಯ ಮಾಡುವಳು
ಬಾಲೆ ತಾನೆಂದು ಬಾಳಲಿನ್ನೆಂದು
ಬರದ ಬಾಲ್ಯವ ದಾಟುವಳು.
ಕನ್ಯೆಯ ಕಣ್ಣಲ್ಲಿ ಕಪ್ಪನೆ ಕಾಡಿಗೆ
ಕೆಂಪನೆ ಕೆನ್ನೇಲಿ ಗುಳಿಬೀಳುವ ನಗೆ
ಕಪ್ಪನೆ ಕೇಶಕ್ಕೆ ಕಣ್ಕುಕ್ಕುವ ಕೇದಿಗೆ
ಕೂಗಿ ಹೇಳುವಳು 'ನಾನು ನಿನ್ನ ಸವತಿ' ಎಂದು ವಸುಮತಿಗೆ
ಮಡಿಸಿದ ಯೌವನವ ಹಿಡಿದು ನಿಲ್ಲಿಸಲು
ನೀಡುವಳು ಕೊರಳ ತಾಳಿಗೆ.
ಸುಮಂಗಲಿಯಾಗಿ ಧರಿಸುವಳು ಸಹನೆ
ಸಹಬಾಳ್ವೆಯ ಪಥದಲ್ಲಿ ಜೀವನ ರಥದ ಚಲನೆ
ಸದಾ ಅರ್ಧಾಂಗಿಯ ಯಶಸ್ಸಿನ ಯೋಚನೆ
ಸಂತಾನವತಿಗೆ ಸಮೃದ್ಧಿಯ ಹೊಣೆ
ಕೊನೆಗೆ ಮುಡುಪಿಡುವಳು ತನ್ನವರಿಗೊಸ್ಕರ
ಇಡಿ ಜೀವನವನ್ನೇ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!