ಮಿಡಿತ 

ಮಿಡಿಯುತಿರಲಿ ನಮ್ಮೊಲವ ಸವಿಮಾತು ,ನಮಗೆ ನಾವೇ ಸಾಕ್ಷಿ ,


ನಿನ್ನ ನೋವನ್ನೆಲ್ಲ ನನ್ನ ಲೆಕ್ಕಕ್ಕೆ ಜಮೆ ಮಾಡು,ನನ್ನ ಸಂತಸವೆಲ್ಲ ನಿನ್ನದೇ.


ರಾತ್ರಿ ಕಳೆದು ಬೆಳಕಾಗುವುದು ನಿನ್ನಿಂದ,


ನಿನ್ನೋಲುಮೆಯಲಿ ಮಿಂದು ಹೇಗಿದ್ದವನು ಹೇಗಾದೆ  ನಾನು,



ನಿನ್ನ ಕಣ್ಣಲ್ಲಿ ನೀರಾಡಿದಾಗ,ಇನ್ನೊಂದು ಕಂಬನಿಯು ಉರುಳಿದರೆ,


ನನ್ನ ಪ್ರೀತಿಯ ಮೇಲಾಣೆ ಸಹಿಸೆನು.