ಆ ಊರಲ್ಲಿ ಪ್ರತಿವರ್ಷವೂ ಊರ ಹಬ್ಬ ನಡೆಯುತ್ತಿತ್ತು. ಬರಗಾಲವಾದ್ದರಿಂದ ಈ ವರ್ಷವೂ ನಡೆಸಬೇಕೋ ಬೇಡವೋ ಎಂದು ನಿರ್ಧರಿಸಲು ದೇವಸ್ಥಾನದಲ್ಲಿ ಪಂಚಾಯಿತಿ ಹಾಕಿದ್ದರು. ದಲಿತರ ಕೇರಿಯ ಭೈರನ ಅಪ್ಪನಿಗೆ ಯಾವಾಗಲೂ ಹಬ್ಬದ ಸಮಯದಲ್ಲಿ ಗಣ (ದೇವರು) ಬರುತ್ತಿತ್ತು, ಅಪ್ಪ ಹೋದ ಮೇಲೆ ಮಗನಿಗೆ ಬರುತ್ತಿತ್ತು. ಅವನಿಗೇನೂ ಬರುತ್ತಿರಲಿಲ್ಲ, ವರ್ಷ ವರ್ಷ ಹಬ್ಬದ ಸಮಯದಲ್ಲಿ ಅಪ್ಪನಿಗೆ ಬರುತ್ತಿದ್ದ ದುಡ್ಡು ಹಣ್ಣು ಹಂಪಲುಗಳು ಅಪ್ಪ ಇಲ್ಲದಿದ್ದಾಗ ಬರಲಿಲ್ಲವಾದ್ದರಿಂದ ತನ್ನ ಮೈಮೇಲೆ ಪ್ರತಿವರ್ಷವೂ ದೇವರನ್ನು ಬರಿಸಿಕೊಳ್ಳುತ್ತಿದ್ದನು. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದವನಿಗೆ ಪಂಚಾಯಿತಿಯಲ್ಲಿದ್ದ ಯಾರೋ ಕಾಲ್ ಮಾಡಿ ಈ ವರ್ಷ ಹಬ್ಬ ಮಾಡುವುದಿಲ್ಲವಂತೆ ಎಂದಾಗ
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
ಅಲ್ಲಿಂದಲೇ ಮೈಮೇಲೆ ಬಂದಂತೆ ಪಂಚಾಯಿತಿ ನಡೆಯುತ್ತಿದ್ದಲ್ಲಿಗೆ ಓಡಿಬಂದು 'ಮಾರಮ್ಮನ ಹಬ್ಬ ವರ್ಷಕೊಮ್ಮೆ ಮಾಡದಿದ್ದರೆ ಈ ಊರಿಗೆ ಊರಿನ ಜನಕ್ಕೆ ಒಳ್ಳೆಯದಾಗುವುದಿಲ್ಲ' ಅಂದಾಗ ಊರಿನವರು ವಿಧಿಯಿಲ್ಲದ ಹಬ್ಬ ಮಾಡುವ ನಿರ್ಧಾರಕ್ಕೆ ಬಂದರು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಬೆಳಕಾರುವಾ ಮುನ್ನ ಕತ್ತಲಾವರಿಸದಿರಲಿ
ಹಳೆಕಥೆಗೊಂದು ಹೊಸಕಥೆ - ೧
ಕುಂಭಕರ್ಣನಾದಾರೂ ಎದ್ದೇಳುತಿದ್ದನೇನೋ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (4)