ಮೇಘಗಳೆಲ್ಲಾ ಒಂದಾಗಿ ಆಗಸದಲ್ಲಿ
ಕಾರ್ಮೋಡದ ಛಾಯೆ

ಬಾನಂಗಳದಲ್ಲಿ ಮೂಡಿತೊಂದು
ಬೆಳ್ಳಿಯ ರೇಖೆ

ಬಾಯಾರಿ ದಣಿದ ಧರೆಯ ಚಿತ್ತ
ಆಗಸದತ್ತ

ಬುವಿಯ ಮೇಲೆ ಬಾನಿಂದ
ಹನಿಗಳ ಸಿಂಚನ

ಎಲೆಯ ಮೇಲಿನ ಬಿಂದುವಿಗೆ ತಾ ಜಾರಿ
ಮಣ್ಣ ಸೇರುವ ಹಂಬಲ

ಬೀಜವೊಂದಕ್ಕೆ ಮೊಳಕೆಯೊಡೆದು
ತನ್ನಿರುವ ತೋರಿಸುವ ಧಾವಂತ