ನಾನೀಲ್ಲದ ಮನೆ ನನ್ನದಲ್ಲ
ನೀನಿದ್ದ ಮನೆ ನಿನ್ನದಲ್ಲ
ನಾನಿದ್ದ ಮನೆಯು ನನ್ನದಲ್ಲ
ನಾವಿರುವ ಮನೆಯು ನಮ್ಮದಲ್ಲ.
ಸುಮ್ಮನೆ ಇರುವೆವು ಎಲ್ಲಾ
ಎಲ್ಲಾ ಮನೆ ಮನೆಗಳಲ್ಲಿ ಎಲ್ಲಾ
ಜೀವವಿರುವ ತನಕ ಎಲ್ಲಾ
ಕಣ್ಣು ಮುಚ್ಚುವ ತನಕ ಎಲ್ಲಾ.
ಈ ಮನೆಯಿಂದ ಆ ಮನೆಗೆ
ಮತ್ತೆ ಮನೆಯಿಂದ ಮನೆಗೆ
ಸುಮ್ಮನೆ ಹೊತ್ತುಕೊಂಡು ಹೋಗುವರು ನನ್ನ
ಆ ನನ್ನ ಕೊನೆಯ ಮನೆಗೆ.
ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.
ಪ್ರತಿಕ್ರಿಯೆ (1)