ಸುಡುವ ಬಿಸಿಲಿನಂತೆ

ಉರಿಯುವ ಕೆಂಡದಂತೆ

ಹರಿಯುವ ವಿದ್ಯುತ್ತಿನಂತೆ

ನೀ ಕೋಪಾಗ್ನಿ ಆಗಬೇಡ

 

ಹರಿಯುವ ನದಿಯಂತೆ

ಸುಳಿದಾಡುವ ತಂಗಾಳಿಯಂತೆ

ಹಾಲ ಬೆಳದಿಂಗಳ ಬೆಳಕಿನಂತೆ

ನೀ ಆಗು ಎಲ್ಲರ ಬಾಳಿಗೆ ಬೆಳಕು

 

ಬದುಕು ಬಾಳಿಗೆ ಸ್ಪೂರ್ತಿ

ಹೃದಯಕ್ಕೆ ಉಸಿರೇ ಸ್ಪೂರ್ತಿ

ನೀ ಆಗು  ಎಲ್ಲರಿಗೂ ಸ್ಪೂರ್ತಿ

ನೀ ಜ್ವಾಲೆಯಂತೆ  ಕೋಪಾಗ್ನಿ ಆಗಬೇಡ.

                                                           ಹಚ್.ವಿರುಪಾಕ್ಷಪ್ಪ ತಾವರಗೊಂದಿ.