ಪೊಂಗೊಳಲ ರಂಧ್ರಗಳ
ಚೆಂಬೆರಳ ತುದಿಗಳಲಿ
ಮುಚ್ಚುತಾ ತೆರೆಯುತಿಹನ
ತಿರುತಿರುಗಿ ಮರಮರಳಿ
ತನ್ನುಸಿರ ಗಾಳಿಯನು
ಕೊಳಲಿನಲಿ ತುಂಬುವವನ
ಅರಳಿದ ತಾವರೆಯ
ಹೋಲುವಾ ಕಂಗಳಿಹ
ಚೆಂದದಾ ನಿಲುವಿನವನ
ವಂದಿಸುವೆ ನಾನೀಗ
ಬೃಂದಾವನದಿ ನಲಿವ
ನಂದಗೋಪನ ಕಂದನ
ಸಂಸ್ಕೃತ ಮೂಲ ( ಲೀಲಾ ಶುಕನ ಕೃಷ್ಣಕರ್ಣಾಮೃತದಿಂದ):
ಅಂಗುಲ್ಯಗ್ರೈಃ ಅರುಣಕಿರಣೈಃ ಮುಕ್ತಸಂರುದ್ಧರಂಧ್ರಂ
ವಾರಂ ವಾರಂ ವದನಮರುತಾ ವೇಣುಮಾಪೂರಯಂತಂ |
ವ್ಯತ್ಯಸ್ತ್ಯಾಂಘ್ರಿಂ ವಿಕಚಕಮಲಚ್ಛಾಯವಿಸ್ತಾರ ನೇತ್ರಂ
ವಂದೇ ವೃಂದಾವನಸುಚರಿತಂ ನಂದಗೋಪಾಲ ಸೂನುಂ ||
ಸಂಪದಿಗರಿಗೆಲ್ಲ ದೀಪಾವಳಿಯ ಹಾರೈಕೆಗಳು.
-ಹಂಸಾನಂದಿ
ಚಿತ್ರ:___LINK_OPEN_ href="http://anubimb.com/blog/2009/11/somnathpur-revisited/#disqus_thread"___ ನಮ್ಮ ಮನೆಯ ಹಜಾರದಲ್ಲಿರುವ ವೇಣುಗೋಪಾಲ ಕೃಷ್ಣ. ಈ ಪದ್ಯದಲ್ಲಿ ಹೇಳಿರುವ "ವ್ಯತ್ಯಸ್ತ್ಯಾಂಘ್ರಿಂ" ಎಂಬ ನಿಲುವಿಗೆ ಒಳ್ಳೇ ಉದಾಹರಣೆಯೆನಿಸಿ ಹಾಕಿದ್ದೇನೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!