ನಮಸ್ಕಾರ ಗೆಳೆಯರೆ,
ಡಿಜಿಟಲ್ ಲೈಬ್ರರಿಯಲ್ಲಿ ಪುಸ್ತಕಗಳನ್ನು ಓದಲು ಯತ್ನಿಸಿದ ನನ್ನಂಥವರು ಅದರ ಕಷ್ಟ ಮತ್ತು ನೋವುಗಳನ್ನು ತಿಳಿದಿರುತ್ತಾರೆ. ಪುಸ್ತಕಗಳನ್ನು PDFನಲ್ಲಿ ಓದಲು ಸಹಾಯವಾಗುವಹಾಗೆ, ಮೊದ ಮೊದಲಿಗೆ ಈ ತರಹ ಕಷ್ಟಗಳನ್ನು ಪಟ್ಟ ನಾಡಿಗರು ___LINK_OPEN_href="http://hpnadig.net/blog/index.php/archives/2007/02/22/download-all-that-you-can" target="_blank" title="unix scriptನ್ನು"___unix scriptನ್ನು ಮತ್ತು ಸುನಿಲ್ ಜಯಪ್ರಕಾಶ್ರವರು ___LINK_OPEN_href="http://eraka.blogspot.com/2007/03/digital-library-of-india.html" target="_blank" title="java ಕ್ರಮವಿಧಿಯನ್ನು"___java ಕ್ರಮವಿಧಿಯನ್ನು ನಿಮ್ಮೊಂದಿಗೆ ಹಂಚಿಕೊಂಡರು. ಅದೇ java ಕ್ರಮವಿಧಿಯನ್ನು ಬಳಸಿ ನಾನೊಂದು ಸಣ್ಣ GUI ಸಲಕರಣವನ್ನು ರಚಿಸಿದ್ದೇನೆ.
___LINK_OPEN_href="http://www.zshare.net/download/bookcreator-jar.html" target="_blank" title="BookCreator version 1.0"___BookCreator version 1.0ನ್ನು ಡೌನ್ಲೋಡ್ ಮಾಡಿ
ಇದನ್ನು ಉಪಯೋಗಿಸಲು ತಮ್ಮ ಗಣಕಯಂತ್ರದಲ್ಲಿ java(JDK ಅಥವಾ JRE) ಸ್ಥಾಪಿಸಿರಬೇಕು. javaದ ಕೋಶಕ್ಕನುಗುಣವಾಗಿ ನಿಮ್ಮ ಗಣಕಯಂತ್ರದ PATH ಮತ್ತು CLASSPATHಗಳನ್ನು ನಿಯಮಿಸಬೇಕು. ತದನಂತರ, DOS promptನಲ್ಲಿ 'java -jar bookcreator.jar' ಎಂದು ಈ ತಂತ್ರಾಂಶವನ್ನು ಉಳಿಸಿರುವ ಕೋಶದಿಂದ ಮೇಲ್ಕಂಡ ಆಙ್ಞೆಯನ್ನು ಟೈಪಿಸಿಬೇಕು.
ನನಗೆ ತಿಳಿದಿರುವ ಲೋಪದೋಷಗಳು ಹೀಗಿವೆ:
- ಪುಸ್ತಕಗಳನ್ನು ಡೌನ್ಲೋಡ್ ಮಾಡುವಾಗ, ಈ ಉಪಕರಣ ಕೆಲವೊಮ್ಮೆ ನಿಮ್ಮ ತೋರು ಉಪಕರಣಕ್ಕೆ ಪ್ರತಿಕ್ರಿಯಿಸುವುದಿಲ್ಲ ಅಥವಾ ತಡವಾಗಿ ಪ್ರತಿಕ್ರಿಯಿಸುತ್ತದೆ.
- firewall ಸ್ಥಾಪಿತವಾಗಿರುವ ಜಾಲದಲ್ಲಿ ಇದು ನಡೆಯುವುದಿಲ್ಲ.
ಈ ಉಪಕರಣವನ್ನು ಉಪಯೋಗಿಸಿ, ನಿಮಗೆ ತಿಳಿದ ದೋಷಗಳನ್ನು ಮತ್ತು ಇತರೆ ಅನಸಿಕೆಗಳನ್ನು ನನಗೆ ತಿಳಿಸಿರಿ.
ಪ್ರತಿಕ್ರಿಯೆ (5)