ಎಂದಿನಂತೆ ಅವನು ಬಿ ಎಂ ಟಿ ಸಿ ಬಸ್ಸು ಹತ್ತಿ ಸೀಟಿನಲ್ಲಿ ಕುಳಿತನು, ಅವನ ಮುಂದಿನ ಸೀಟಿನಲ್ಲಿ ಒಂದು ಅಜ್ಜಿ ಬಂದು ಕುಳಿತುಕೊಂಡಿತು. ಬಸ್ಸು ಹೊರಟಿತು, ಕಿಟಕಿಯ ಹತ್ತಿರ ಕುಳಿತಿದ್ದ ಅಜ್ಜಿ ಸ್ವಲ್ಪ ಸಮಯದ ನಂತರ ಹಾಗೇ ಸಿಕ್ಕಿಸಿಕೊಂಡ ಜುಟ್ಟಿನ ಗಂಟನ್ನು ಬಿಚ್ಚಿ ಹೊರಗಡೆಯಿಂದ ಬಂದ ಗಾಳಿಗೆ ತನ್ನ ಕೂದಲನ್ನು ಒಡ್ಡುತ್ತಿತ್ತು. ಎಲ್ಲ ನೋಡಿ ಸುಮ್ಮನಿದ್ದ ಅವನು, ಯಾವಾಗ ಅಜ್ಜಿ ಕೂದಲನ್ನು ತುಂಬಾ ಸಮಯ ತನ್ನ ಕೈನಿಂದ ಅತ್ತ ಇತ್ತ ಆಡಿಕೊಳ್ಳುತ್ತಿತ್ತೋ ಇವನು ತಡೆಯಲಾರದೆ 'ಅಜ್ಜಿ, ಆಗ್ಲಿಂದ ನೋಡ್ತಿದ್ದೇನೆ, ಜುಟ್ಟು ಕಟ್ಕೊಳದಲ್ವ ನಮಗೆ ತೊಂದ್ರೆ ಆಗ್ತಿದೆ'. ಅಜ್ಜಿ ತಿರುಗಿ ಇವನನ್ನೊಮ್ಮೆ ನೋಡಿ..
.
.
.
.
.
.
.
.
.
.
.
.
.
.

'ಯಾಕ್ಮಗಾ?? ಯಾವ್ದಾದ್ರೂ ಹುಡುಗಿ ಆಗಿದ್ರೆ ಹಂಗೆ ಕಣ್ಬಿಟ್ಕೊಂಡು ನೋಡ್ತಿದ್ದೆ, ಮುದ್ಕಿ ನಾನು, ನನ್ನ ಕೆಲಸ ನಾನು ಮಾಡ್ಕೊಂಡ್ರೆ ನಿಂಗೇನಪ್ಪ ತೊಂದ್ರೆ??'