ಬದುಕುವ ಆಸೆಯೊಂದಿಗೆ ಮಗು ಹುಟ್ಟುವುದಿಲ್ಲ

ಹುಟ್ಟಿದ ಮೇಲೆ ಬದುಕಬೇಕೆಂಬ ಆಸೆ ಹುಟ್ಟುವುದು

ಕಂದ ಅರಿಯದ ಕಂದ ಜಲ್ಮ ತಾಳಿದ

ಜಲ್ಮತಾಳುತ್ತಲೇ ಕಷ್ಟ ಸುಖಗಳ ಕಲಿತಾ ಬಂದ

 

ಮೊದಲು ಕಂದ ಅಮ್ಮವೆನ್ನುವ ಪದವ ಕಲಿತ

ತದನಂದತ ಜೀವನಕ್ಕೆ ಬೇಕಾದುದ್ದೇಲ್ಲ ಕಲಿಯುತ ಬಂದ

ಸತ್ಯ ಮಿಥ್ಯ ಮರ್ಮ ಮೋಸಗಳೆಲ್ಲ ತಾನು ಬದುಕಲಿಕ್ಕೆ ಕಲಿತ

ಕಂದ ದ್ವೇಷ ಅಸುಹೆ ಮತ್ಸರಗಳೆಲ್ಲ ಸಮಾಜದಿಂದ ಕಲಿತ

 

 ಆಸೆಗೆ ಮಿತಿಯಿಲ್ಲದೆ ಬೆಳೆದು ನಿಂತ ಕಂದ

ದೊಡ್ಡವನಾದ ಕಂದ ಸ್ವಾರ್ತಿಯಾದ ಎಲ್ಲಾ ನನ್ನದೆಂದ

ನಾನು ಬದುಕಲು ಈ ಜಗದೊಳಗೆ ನನಗಾಗಿ ನಾನೆಂದ

ಮುಂದೊಂದು ದಿನ ಆಸೆಗೆ ದುರಾಸೆಗೆ ಕೊಡಲಿ ಪೆಟ್ಟು ತಿಂದ

 

ಕಂದನಿಗೆ ಕೊಡಲಿ ಪೆಟ್ಟು ಅರಿವಾಗಿತು

ಆಸೆ ದುರಾಸೆಗೆ ಕಡಿವಾಣ ಹಾಕಿದ

ಈ ಜಗದ ಸತ್ಯ ಮಿಥ್ಯಗಳೆ ಅಲೋಚಿಸ ತೋಡಗಿದ

ಕಂದ ಮಾನವ ಜಲ್ಮದ ಸಾರ್ಥಕತೆಯ ತಿಳಿದು ಒಳ್ಳೆಯವನಾಗಿ ಬಾಳಳು ಕಲಿತ.

 

                                                                                                                                       ಹೆಚ್.ವಿರುಪಾಕ್ಷಪ್ಪ ತಾವರಗೊಂದಿ

                                                                                                                                       ಪೋನ್.ನಂ.8722597351