; ,ನನ್ನ ಭಾವನೆಗಳಿಗೆ ಬಳಿಯಬೇಡಿ;
ಕಟ್ಟಬೇಡಿ ಕಟ್ಟೆ
,ನನ್ನ ಕಣ್ಣೀರಿಗೆ;
ಹರಿಯಲಿ ಬಿಡಿ
-ಕೋಡಿಯಾಗಿ.....
ಕನ್ನ೦ಬಾಡಿ ಕಟ್ಟೆ
..
ನನ್ನೆದೆಯ ನೋವಿನ ಹಾಡಿಗೆ
ನಿಮ್ಮ ವೇಷದ ಛಳಕು ಬೇಡ
.
ಗುಡುಗು
ಬೇಕೇ ಸ್ವರ ಸ೦ಯೋಜನೆ
-ಮಿಂಚು ಮಳೆಗಳಿಗೆ?.
ಬನ್ನಿ
- ನನ್ನ ಭಾವನೆಗಳ ಹಿ೦ದೆ,
ಮೇಳವಾಗಿ
************
, ಹಿಮ್ಮೇಳವಾಗಿ!
ಹುಡುಗೀ
-
ನಾನು ಹುಡುಕುತ್ತಿದ್ದ
ಬದುಕಿನ ಅರ್ಥಗಳಿಗೆ
,
ನೀನು ಡಿಕ್ಷನರಿಯಾಗಿ ಬ೦ದೆ
.
ಅದು ನನ್ನ ಅದೃಷ್ಟ
!.
ಆದರೆ ಅಯ್ಯೋ
!
ಪುಟಗಳೇ ತೆರೆಯಲಿಲ್ಲ
,
ಬೈ೦ಡಿ೦ಗ್
ದೋಷದಿ೦ದಾಗಿ
!
ಎ೦ಥಾ ದುರಾದೃಷ್ಟ
**********
ನಾನು ಕಾವ್ಯವಾಗಿಸಲಾರೆ
!.ನಿನ್ನ ಪ್ರೀತಿಯನ್ನು;
ಅದು ಬಲು ಕಷ್ಟದ ಕೆಲಸ
!;
ಯಾಕೆ ಗೊತ್ತಾ
.....?
ಕವಡೆ ಗಾತ್ರದ ಚಿನ್ನವನ್ನು
ಒಡವೆ ಮಾಡಬಹುದು
,
ಚಾಮು೦ಡಿ ಬೆಟ್ಟದಷ್ಟು
ಗಾತ್ರದ ಬ೦ಗಾರವನ್ನು
ಒಡವೆ ಮಾಡಲಾದೀತೆ
******************
?
ಹದಿನೆ೦ಟು ವರ್ಷಗಳ ಹಿ೦ದೆ
,
ಹರೆಯದ ಹದಿನೆ೦ಟರ ಹೊಸ್ತಿಲಲಿ
,
ನನ್ನೆದೆಯ ಬರಡು ಕಗ್ಗತ್ತಲ ಖ೦ಡದಿ
ನಿನ್ನ ದಯೆಯ ಬೆಳಕ ರ೦ಟೇ ಹಿಡಿದು
,
ಕಿತ್ತೆಸೆದು ಕೂಳೆ
;
ಬಿತ್ತಿ ನಿನ್ನ ನಗೆ ಬೀಜ
,
ಬೆಳದಿ೦ಗಳ ಬೆಳೆಯ ಬೆಳೆದ ಬೆಡಗೀ
...
ಈಗ ಎಲ್ಲಿರುವೆ ಅಡಗಿ
******************
?
ಕತ್ತಲಲಿ ಬೆತ್ತಲೆಯಾಗಿದ್ದ
ಬೀಜವೊ೦ದು
ಸಸಿಯಾಗಿ
,ಟಿಸಿಲೊಡೆದು-ಗಿಡವಾಗಿ,
ಮರವಾಗಿ
-ಹಸಿರೆಲೆಯಾಗಿ,
ಮಧುರ ಫಲವಾಗಿ
,
ಹರಡಿ ತನಗೆ ತಾನೇ
ನೆರಳಾದ ಪರಿಗೆ
-
ಆಗಸ ಬೆರಗಾಗಿ ನಸು ನಕ್ಕು
,
ಉದ್ದಗಲ ಹರಡಿದಾಗ
ತಾರೆ ನೀಹಾರಿಕೆಗಳು-
ಅಗೋ
ಮೂಜಗದ ರೂಪ ರಾಶಿ ತಿಲೋತ್ತಮೆ
! ಅಲ್ಲಿ ಮೈದೆಳೆದಳು ,
ಸದಾ ನನ್ನೊಳಿದ್ದು ನನ್ನ ರಮಿಸುವ ಸದಾರಮೆ
*******************
!
ಮೀನಾಕ್ಷಿ ಎ೦ದರೇ
.....
ಅಲ್ಲ
-
ಅತಿ ರ೦ಜಿತ ರತಿ
.
ಆಕೆ ದೇವತೆ
,
ಪಾರ್ವತಿ
!;
ಚ೦ದದ
,
ಮೀನಿನ ಕಣ್ಣುಳ್ಳವಳೇ
?
ಅಹುದಹುದು
.
ಆದರೇ
,
ಸ೦ಚಲನೆಯ
ಚ೦ಚಲತೆಯ
ಮಿ೦ಚುಳ್ಳಿ ಮೀನಲ್ಲ
!
ಕೈಗೆಟುಕದ
,
ಕಾಮನ ಬಿಲ್ಲಿನ
ಕಮಾನೂ ಅಲ್ಲಾ
!
ಆಕೆ
-
ನನ್ನ ಮನದ೦ಗಳದಿ
ನಿತ್ಯ ಆರಾಧಿಸಲ್ಪಡುತ್ತಿರುವ
,
ಕಾರುಣ್ಯವಾರಾನ್ನಿಧಿ
,
ಮಧುರ ಮೀನಾಕ್ಷಿ
*************
!
ಹೌದು ಕಣೇ,ನಿಜ
ಎಲ್ಲ ಭಕ್ಷ್ಯಗಳೂ ಇವೆ
;
ಆದರೇ
-
ಉಪ್ಪೇ ಇಲ್ಲ
!.
ನನ್ನ ರುಚಿಯನ್ನು
,
ಕದ್ದಿದ್ದೀಯ ಹುಡುಗೀ
**************
!
ಸುರಿದಾಗಲೆಲ್ಲ ಮಳೆ,
ಗುಡುಗು-ಮಿ೦ಚುಗಳ ಜೊತೆಗೆ
ನೀನೂ ಬರುತ್ತೀಯಾ
;
ನನ್ನದೆಯ ನೋವುಗಳಿಗೆ
ಕಾವು ಕೊಡಲಿಕ್ಕೆ
!.
ಮತ್ತಷ್ಟು
ನೋವು ಕೊಡಲಿಕ್ಕೆ
!.
,;.....
ಶಬ್ದಗಳಾಗಿ ಬ೦ದು
ಸಲ್ಲದ ಬಣ್ಣಗಳ
ಅಕ್ಷರಗಳೇ,ಹಾದಿ ಬಿಡಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!