ಬೆಟ್ಟದ ತಾಯಿ ಚಾಮು೦ಡಮ್ಮನ ಕೃಪೆ

.
ನನ್ನ ಅನ್ನಿಸಿಕೆಗಳು

---------------

.
ಪ್ರೀತಿ ಜೀವಕ್ಕೆ

,ಜೀವನಕ್ಕೆ ವಿಶಿಷ್ಟ ಅರ್ಥ,ಉತ್ಸಾಹ,ಶಕ್ತಿ ಸ೦ಚಯಗಳನ್ನು ಕೊಡಮಾಡುವ ಒ೦ದು ಅದ್ಭುತ ಗುಣ.ಪ್ರೀತಿಯಿಲ್ಲದ ಮಾನವ ಸ೦ಬ೦ಧಗಳು ಬರಡು.ಅನಾದಿ ಕಾಲದಿ೦ದಲೂ ಕಥೆ,ಕಾವ್ಯ , ಪುರಾಣ , ನಾಟಕ,ಕಾದ೦ಬರೀ,ಶಿಲ್ಪ,ನೃತ್ಯ,ಚಿತ್ರಕಲೆ ಮತ್ತಿತರ ಮಾಧ್ಯಮಗಳ ಮೂಲಕ ಈ ಸ೦ಜೀವಿನಿ ಗುಣದ ಪ್ರೀತಿಯನ್ನು ಮನುಷ್ಯ ಗುರುತಿಸಿ ಅದನ್ನು ಅಲ೦ಕೃತಗೊಳಿಸುತ್ತಾ ಬ೦ದಿದ್ದಾನೆ.ಇದಕ್ಕೆ ನಿದರ್ಶನವಾಗಿರುವ ಮಹಲುಗಳು, ತಾಜಮಹಲುಗಳು ಸಾವಿರಾರು.
ಕಾಳಿದಾಸನ ಮೇಘಸ೦ದೇಶ

,ಷೇಕ್ಸ್-ಪಿಯರನ ರೋಮಿಯೋ-ಜೂಲಿಯಟ್,ಹೋಮರನ ಹೆಲೆನ್ ಆಫ್ ಟ್ರಾಯ್, ಇರ್ವಿ೦ಗ್-ಸ್ಟೋನ್ ನ ಲಸ್ಟ್ ಫಾರ್ ಲೈಫ಼್,ರವಿ ಬೆಳಗೆರೆ ಅವರು ಕನ್ನಡಕ್ಕೆ ರೂಪಾ೦ತರಿಸಿರುವ , ಗೇಬ್ರಿಯಲ್ ಗಾರ್ಸಿಯ ಮಾರ್ಕ್ವೆಜ್ ನ ಲವ್ ಇನ್ ಟೈಮ್ಸ್ ಆಫ್ ಕಾಲೆರ( ಮಾ೦ಡೋವಿ), ನಮ್ಮ ಕೆ.ಎಸ್.ನರಸಿ೦ಹ ಸ್ವಾಮಿಯವರ ಮೈಸೂರು ಮಲ್ಲಿಗೆ... ಹೀಗೆ ಸಾಕಷ್ಟು ಉದಾಹರಣೆಗಳು ನಮಗೆ ಗೋಚರಿಸುತ್ತವೆ.ಎಲ್ಲ ಕಾಲಗಳಲ್ಲೂ,ಎಲ್ಲ ಪ್ರದೇಶಗಳಲ್ಲೂ,ಎಲ್ಲ ಜನಾ೦ಗಗಳಲ್ಲೂ ಪ್ರೀತಿಯ ಅನನ್ಯತೆಯನ್ನು ಅಲ೦ಕರಿಸಿ ವೈಭವೀಕರಿಸಿರುವುದನ್ನು ನಾವು ಕಾಣ ಬಹುದು..ನಮ್ಮ ಬಹುತೇಕ ಚಲನಚಿತ್ರಗಳ ವಸ್ತು ಪ್ರೀತಿಯೇ!.
ಪ್ರೀತಿಗಾಗಿ ನಡೆದಷ್ಟು ಯುದ್ಧಗಳು ಬೇರೆ ಕಾರಣಗಳಿಗೆ ನಡೆದಿಲ್ಲ ಎನ್ನುತ್ತಾರೆ

.ಅದು ಸುಳ್ಳು.ಪ್ರೀತಿ ರಕ್ಷಿಸುತ್ತದೆ,ಕಾಯುತ್ತದೆ; ಅದು ಕೊಲ್ಲುವುದಿಲ್ಲ.ಅಲ್ಲಿ ಹಿ೦ಸೆ ಇಲ್ಲ.ಪ್ರೀತಿಯನ್ನು ವ್ಯವಸ್ಥೆ ವಿರೋಧಿಸಿದಾಗ ಅಲ್ಲಿ ಸ೦ಘರ್ಷಗಳು, ಯುದ್ಧಗಳು ಆಗಿವೆ , ಆಗುತ್ತವೆ, ಪ್ರೀತಿಯ ರಕ್ಷಣೆಗಾಗಿ!.
ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಅ೦ದಿನಿ೦ದಲೂ

, ಕಳ್ಳತನ, ಕೊಲೆ,ಸುಲಿಗೆ . ಶೋಷಣೆಗಳ ವಿರುದ್ಧ ನಡೆದ ಪ್ರತಿಭಟನೆಗಳಿಗಿ೦ತ ಪ್ರೀತಿಯ ವಿರುದ್ಧ ನಡೆದ ಸ೦ಘರ್ಷಗಳೇ ಹೆಚ್ಚು!.ಇದು ಸಮಷ್ಟಿಯ ಹಿತದ ಹೆಸರಲ್ಲಿ ನಡೆಯುತ್ತಾ ಬ೦ದಿರುವ , ವ್ಯಕ್ತಿಯ ಮೇಲಿನ ದೌರ್ಜನ್ಯ.ವ್ಯಕ್ತಿಯ ಹಿತವೇ ಸಮಷ್ಟಿಯ ಹಿತ.;ವ್ಯಕ್ತಿ ಸಮಷ್ಟಿಯ ಹೊರಗೆ ಬದುಕ ಬಲ್ಲ.ಆದರೆ ವ್ಯಕ್ತಿಯೇ ಇಲ್ಲದ ಸಮಷ್ಟಿ ಎಲ್ಲಿದೆ?
 


-

 

 

ಡಾ|ಭ.ನಾಗರಾಜ್.