[ಪ]

ನೀವೇನೆ ನಮ್ ದೇವ್ರು

ನೀವೇನೆ ನಮ್ ಬೇರು

ಅಂತ ಹೇಳಿ ನಮ್ಗೇನ್ ಮಾಡ್ದ್ರಿ?

ಹೇಳಿ ಪೂಜಾರಿಗಳೆ ಈ ದೇವ್ರ‍್ಗೆ ಅಂತ ಏನೇನ್ ಮಾಡ್ದ್ರಿ?

 

[೧]

ಜೋಳ್ಗೆಗೆ ಹೋಳ್ಗೆ ಹಾಕಿ

ಕೈಕೈಗೆ ದುಡ್ಡು ಕೊಟ್ಟು

ಚುನಾವಣೆಲಿ ಗೆದ್ದೇಬಿಡ್ತೀರಲ್ಲ?

ಅಣ್ಣಾ, ನಮ್ಗೇನೆ ಗೆದ್ಲು ತಿನ್ಸ್ತೀರಲ್ಲ?!

 

[೨]

ರೂಲ್ಸು ಮೇಲೆ ರೂಲ್ಸು ಮಾಡಿ

ಕಾಸಿಂದ್ಲೆ ಅವನ್ನು ದೂಕಿ

ಬ್ರಷ್ಟರಿಗೆ ದೇವ್ರೆ ಆಗಿ

ಬೊಜ್ಜು ಬೆಳ್ಸಿ ನಾಡ ನಾಡಿಗಳನ್ನೆ ಪಚ್ಡಿಮಾಡ್ತೀರಲ್ಲ?

ಹೇಳಿ ಪಕ್ಷ ಪಕ್ಷಿಗಳೆ ಈ ದೇವ್ರ‍್ಗೆ ಅಂತ ಏನೇನ್ ಮಾಡ್ದ್ರಿ?

 

-----

 

ನನ್ನ ಅಭಿಪ್ರಾಯ

ಇಂದು ಪ್ರಾಮಾಣಿಕರನ್ನು ಹುದುಕುವುದು ’ಮರಳ ರಾಶಿಯಲ್ಲಿ  ಬಿದ್ದ ಸಾಸಿವೆಯೊಂದನ್ನು’ ಹುಡುಕಿದಂತೆ.