ಕೇವಲ ಮುಖ ನೋಡಲು ಫೇಸ್ ಬುಕ್ ಇರುವುದಾದರೆ
ಇರುವುದೇಕೆ ಸೆಂಡ್ ರಿಕ್ವೆಸ್ಟು, ಸುಮ್ಮನಿರುವ ಮನುಷ್ಯ ನಾನಾದರೆ
ನಿನ್ನ ಪ್ರೊಫೈಲ್ ಚಿತ್ರವೇ ನನಗೆ ಸಾಕಲ್ಲವೇ
ರಿಕ್ವೆಸ್ಟ್ ಕಳಿಸಿದ ನನ್ನ ಹುನ್ನಾರ ನಿನಗರಿಯದೇ?

ನಿನ್ನ ಎಲ್ಲಾ ಸ್ಟೇಟಸ್ಸುಗಳಿಗೆ,ಚಿತ್ರಗಳಿಗೆ ಮಾಡುವೆ ನಾ ಲೈಕು, ಕಮೆಂಟು
ಎಷ್ಟು ಜನರೊಂದಿಗೆ ಬೇಕಾದರೂ ಚಾಟ್ ಮಾಡುತ್ತಿರು ನೀನು
ನಾನು ಹಾಯ್ ಹೇಳಿದಾಗ ಹರಿಯಲಿ ನನ್ನ ಕಡೆ ಗಮನ
ಮರು ಹಾಯ್ ಹೇಳುವಷ್ಟು ಸೌಜನ್ಯ ತೋರಲಿ ನಿನ್ನ ಮನ

ಒಮ್ಮೊಮ್ಮೆಯಾದರೂ ಹಾಕಿ ಬಿಡು ದೃಷ್ಟಿ ನನ್ನ ಪ್ರೊಫೈಲಿನತ್ತ
ನಾ ಹಾಕುವ ನನ್ನ ಸುಂದರ ಚಿತ್ರಗಳ ಕಡೆಗೆ ಹರಿಯಲಿ ನಿನ್ನ ಚಿತ್ತ
ಅಪರಿಚಿತನೆಂದು ಹೆದರಿ ದೂರವಾದರೆ ನಷ್ಟ ನೋಡು ನಿನಗೆ
ಅಪರಿಚಿತರೇ ಪರಿಚಿತರಾಗುವುದು ಒಂದು ಸ್ನೇಹದ ಬಗೆ 

ಓ ಹುಡುಗಿ ಇನ್ನು ತಾಳಲಾರೆ ಬವಣೆ
ಒಂಚೂರು ಹರಿಸು ನನ್ನ ಮೇಲೆ ಕರುಣೆ
ಇಂದೇ ಒತ್ತು ಆ ಬಟನನ್ನು, ಬರಲಿ ನನಗೆ ನಿದ್ರೆ
ಒಮ್ಮೆ ನನ್ನ ನೋಟಿಫಿಕೇಶನ್ನಿನ ಪಟ್ಟಿಯಲ್ಲಿ ಬೀಳಲಿ ನಿನ್ನ ಮುದ್ರೆ