ಹುಣ್ಣಿಮೆಗೆ

 

ನೀ ಹೋಗಿ ತಿಂಗಳಾಯಿತು

ತಿರುಗಿ ಬಾ ಹುಣ್ಣಿಮೆ

ಬಾನೆಲ್ಲ ಕತ್ತಲಾಯಿತು

ತೋರಿಸು ನಿನ್ನ ಮಹಿಮೆ

 

ಇದ್ದರೇನು ಕೋಟಿ ತಾರೆಗಳು

ನೀನಿಲ್ಲದಾ ಬಾನಿನಲ್ಲಿ

ಸುರಿಸು ನೀ ಬೆಳದಿಂಗಳು

ನಿತ್ಯವೂ ನಗುವ ಚೆಲ್ಲಿ

 

ನೋಡಿಲ್ಲಿ ಕಡಲಲ್ಲಿ ಏರಿಳಿತವಿಲ್ಲ

ನೀ ಇಲ್ಲ, ಅಲೆ ಉಕ್ಕಲಿಲ್ಲ

ಬಾ ಬೆಳದಿಂಗಳಾ ಬಿತ್ತು ಅಲ್ಲಿ

ಯವ್ವನವ ತುಂಬು ಮೌನದ ಕಡಲಿಗೆ

 

ಕಬ್ಬಿಗರ ಕನ್ನಡಿ ನೀನಲ್ಲವೆ

ಪ್ರೇಮದ ಮುನ್ನುಡಿಗೆ ನೀನಿಲ್ಲವೆ

ಬಾ ಬೆಳದಿಂಗಳ ಸುರಿಸು

ನನ್ನ-ಅವಳ ಒಂದು ಗೂಡಿಸು

 

 

ಐ.ಎಲ್.ಷಣ್ಮುಖ