ನಿಲ್ಲಿ ಭಾವಗಳೆ
ನನ್ನೊಳಗಿನ ಜೀವಗಳೇ,
ಹೋಗದಿರಿ ಬಿಟ್ಟು
ನನ್ನ ಎಲ್ಲೂ.
ಇದ್ದೀರಿ ಹಲವಾರು
ವರುಷ ನನ್ನೊಳಗೆ,
ನನ್ನವರಾಗಿ, ನನ್ನಂತೆಯೇ.
ನೀವು ಹೋದರೆ
ಸುಖ-ದುಃಖಗಳ
ಅರಿವು ನನಗಾಗದು.
ಅಂದು-
ನನ್ನ ಮುದಗೊಳಿಸಿದ ನೆನಪು,
ಕರಾಳ ದಿನವಾಗಿಸಿದ ನೆನಪು-
ಮರೆತು ಹೋಗದು ದೂರ.
ಇಂದು-
ನನ್ನ ಮನ ಬಂಜರು
ಭೂಮಿಯಾಗಿದೆ.
ಅಲ್ಲಲ್ಲಿ ಅಲ್ಪ-ಸ್ವಲ್ಪ
ನೆನಪುಗಳು-ಕನಸುಗಳು,
ನೀರಿಲ್ಲದೆ ನಿರ್ಜೀವವಾಗಿವೆ,
ಎಲ್ಲವೂ ಕಳೆಯಿಂದಲೇ ತುಂಬಿ ಹೋಗಿದೆ.
ಬಹುಶಃ-
ದೂರ ಹೋಗಿರಬೇಕು ಭಾವಗಳು
ನನ್ನಿಂದ, ಯಾಕೆ ಹೀಹಗಾಯಿತು?
ನನ್ನ ಮನದಂತರಾಳ ತೆರೆದಿದೆ,
ನಿಮ್ಮಾಗಮನಕ್ಕೆ ಹಾತೊರೆಯುತ್ತಿದೆ.
ಭಾವಗಳೇ ಬಂದು ಬಿಡಿ,
ನೆಲೆಯಾಗಿ ಮತ್ತೆ.
ಮೈದೋರಿ ನಿಲ್ಲಲಿ ಮನ
ಹಚ್ಚ ಹಸುರಾಗಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!