ನಮ್ಮ ದೈನಂದಿನ ಚಟುವಟಿಕೆ ಕೆಲಸ ಕಾರ್ಯಗಳಲ್ಲಿ ಆಂಗ್ಲ ಪದ ಬಳಕೆ ಸಾಮಾನ್ಯವಾಗಿ ಹೋಗಿದೆ.

ನಾವು ಕನ್ನಡಿಗರು ಇಂದು ಕನ್ನಡಿಗರಾಗಿರದೆ ಕಂಗ್ಲೀಷಿಗರಾಗಿದ್ದೇವೆ. ಏಕೆ ನಮಗೆ ಕನ್ನಡ ಪದ ಸೃಷ್ಟಿ ಕಷ್ಟವೇ?

ನನ್ನ ಚಿಂತನೆ ಏನೆಂದರೆ ನಾವೇಕೆ ನಮ್ಮ ನಾವೇಕೆ ನಮ್ಮ ಕನ್ನಡ ಪದಗಳನ್ನು ಸೃಷ್ಟಿಸಬಾರದು?

ನಮ್ಮಿಂದ ಅದು ಸಾದ್ಯವಿಲ್ಲವೇ? ಅಥವಾ ನಮಗೆ ಸಮಯದ ಅಭಾವವೇ?

ಬನ್ನಿ ಸ್ವಲ್ಪವಾದರೂ ಪ್ರಯತ್ನಿಸೋಣ.

ಇಲ್ಲಿ ನಾವು ಸೃಷ್ತಿಸುವ ಪದಗಳಿಗೆ ಸರಿಯಾದ ಅರ್ಥ ಬಂದರೆ ಸಾಕು.

ಮೊದಲಿಗೆ BUS - ಗೆ ಕನ್ನಡದಲ್ಲಿ ಏನೆಂದು  ಹೇಳಬಹುದು? 

ಮುಂದಿನ ಪದ - Engine ಗೆ ಕನ್ನಡದಲ್ಲಿ ಏನೆಂದು ಹೇಳಬಹುದು?

ರತ್ನನ ಪದ - ನರ್ಕಕೇರ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರುನು

ಮೂಗ್ನಲ್ ಕನ್ನಡ್ ಪದ್ ವಾಡ್ತೀನಿ ನನ್ ಮನ್ಸನೀಕಾಣೆ

ಎಂಡಾ ಹೋಗ್ಲಿ ಎಡ್ತಿ ಹೋಗ್ಲಿ ಎಲ್ಲ ಕೊಚ್ ಕೊಂಡ್ ಹೋಗ್ಲಿ

ಪರ್ ಪಂಚ್ ಇರೊ ತನ್ಕಕನ್ನಡ ಪದಗೊಳ್ ನುಗ್ಲಿ...

ಈಗಿನ ಸ್ಠಿತಿ -

ನರ್ಕಕೇರ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರುನು

ಮೂಗ್ನಲ್ english ಪದ್ ವಾಡ್ತೀನಿ ನನ್ ಮನ್ಸನೀಕಾಣೆ

ಎಂಡಾ ಹೋಗ್ಲಿ ಎಡ್ತಿ ಹೋಗ್ಲಿ ಕನ್ನಡ ಕೊಚ್ ಕೊಂಡ್ ಹೋಗ್ಲಿ

ಪರ್ ಪಂಚ್ ಇರೊ ತನ್ಕ english ಪದಗೊಳ್ ನುಗ್ಲಿ...

 

ಸ್ವಲ್ಪವಾದರು ನಮ್ಮ ಕ್ರಿಯಾಶೀಲತೆಗೆ ಕೆಲಸ ಕೊಡೋಣ ಪ್ರತಿಯೊಬ್ಬರು ಕನ್ನಡ ಪದಗಳ ಸ್ರುಷ್ಟಿಗೆ ಪ್ರಯತ್ನಿಸೋಣ