ಅಪ್ಪ
ಪ್ರೀತಿ ಕಂದನ ಮುದ್ದಿ ಆಡಿಸಿ
ತುಸುವೆ ಗದರುತ ಶಿಸ್ತ ಕಲಿಸಿ
ಕಲ್ಲ ಕೆತ್ತುತ ಮೂರ್ತಿ ರೂಪಿಸಿ
ತಪ್ಪ ಕ್ಷಮಿಸಿ ಧೈರ್ಯ ತುಂಬಿದ ಅಪ್ಪ...
ಬಾಳ ಪಯಣದಿ ದಾರಿ ತೋರಿಸಿ
ಗೆಲುವ ಮೆರೆಸಿ ನೋವ ಮರೆಸಿ
ಸ್ಫೂರ್ತಿ ಸೆಲೆಯ ಚಿಲುಮೆಯಾಗಿ
ಏಳು ಬೀಳಲಿ ಅಭಯ ನೀಡಿದ ಅಪ್ಪ...
ಬಾಲ್ಯದಲ್ಲಿ ಗುರುವು ಆದೆ
ಪ್ರಾಯದಲ್ಲಿ ಗೆಳೆಯನಾದೆ
ಬದುಕು ತಿದ್ದುವ ಆರ್ಯನಾದೆ
ಬಾಳ ನೌಕೆಗೆ ದಿಕ್ಸೂಚಿಯಾದೆ ನೀ ಅಪ್ಪ...
ಒಲವು ತೋರಿಸಿ ಚಿಂತೆ ಅಳೆಸಿ
ನನ್ನ ಮೊಗದಲಿ ಗೆಲುವ ಅರಸಿ
ತನ್ನ ಬಾಳನು ಎನಗೆ ಸವೆಸಿ
ತ್ಯಾಗ ಮೂರ್ತಿಯ ರೂಪ ಮೆರೆದ ಅಪ್ಪ...
ನನ್ನ ಬಾಳು ನಿನ್ನ ಬಿಕ್ಷೆ
ನಿನ್ನ ತ್ಯಾಗಕೆ ಋನಿಯು ನಾನು
ಇರಲಿ ಹೇಗೆ ಅಗಲಿ ನಿನ್ನ
ಮೊದಲ ಸಾವು ಬರಲಿ ನನಗೆ ಅಪ್ಪ....
- ಗಾಯಕವಾಡ್
ಪ್ರತಿಕ್ರಿಯೆ (2)