ನಿನ್ನೆಮೊನ್ನೆಯವರೆಗೆ
ನಿನ್ನಿರವಿನರಿವಿರಲೇಇಲ್ಲನನಗೆ.

ಅಂದು
ಸಹ್ಯಾದ್ರಿಯಸೆರಗಿನಿಂದ
ನೀಹನಿ
ಹನಿಯಾಗಿತೇಲಿ
ಬಂದುನಿಂತಾಗನನಗೆಕನಸು
ಹರಿಯುವಹೊತ್ತು,
ಶತಶತಮಾನಗಳಕಾಯುವಿಕೆ
ಗೆತೆರೆಬಿದ್ದಿತ್ತು.

ಪಟಪಟತೆರೆದದಿನಗಳೊಂದೊಂದರಲಿ
ಸರಸರಹರಿದಮಾಸಮಾಸಗಳಲಿ
ನಿನ್ನನಗೆಯಕುಲುಕುಲುಹನಿಗಳು
ಹಗಲಲ್ಲಿಹೂವಾಗಿಅರಳಿದವು,
ರಾತ್ರಿನಕ್ಷತ್ರಗಳಾಗಿಮಿನುಗಿದವು.

ಬದುಕೊಂದುಮಗ್ಗಲುಬದಲಿಸಿದ
ಸಂಕ್ರಮಣ,
ಕನಸಿನಿಂದನನಸಿಗೋ
ಮತ್ತೊಂದುಕನಸಿಗೋಜಾರಿ
ದಂಥಸುಷುಪ್ತಿಯಲಿಮಿನುಗಿ
ದಅಗ್ನಿಯಸುತ್ತನನ್ನಬೆನ್ನಹಿಂದೆ
ಸಪ್ತಪದಿತುಳಿದದ್ದುನೀನೋ
ಅಥವಾಬರೀನಿನ್ನನೆರಳೋ?
ಅರಿವಾಗದೇಬೆರಗಾದೆಒಂದುಕ್ಷಣ.

ಮೈಮನಗಳಮಿಲನದ
ನನಸಿನಂಥಾಕನಸು
ನಿಶಾಗೀತ
ಭೋರ್ಗರೆದುಕ್ಕಿದನೆರೆಗಂಗೆಯಾಳಕ್ಕೆ
ನನ್ನನ್ನುಸೆಳೆದದ್ದುನೀನೋ
ಅಥವಾಬರೀನಿನ್ನನೆನಪೋ?
ತಿಳಿಯದೇತೊಳಲಿದೆಒಂದುಕ್ಷಣ.

ಬೆಳಗಾಗುವಹೊತ್ತಿಗೆಎಲ್ಲ
ಮಳೆಯಹಾಗೆನಿನ್ನಜೇನಹನಿ
ಮಳೆನಿಂತೇಹೋಗಿತ್ತು.

ನೀನಾನಾಗಿನಾನೀನಾಗಿ
ಮತ್ತೆ
ನೀನೀನೇನಾನಾನೇಆಗಿ
ಹೋದದ್ದುಕಣ್ಣಂಚಿನಲ್ಲೇಕರಗಿದ
ಕನಸೆನಿಸಿತ್ತು.
ಎದೆಯಲ್ಲಿಆಸೆಯೊಂದು
ಅನಾಥವಾಗಿಅತ್ತಿತ್ತು-

ಈಬದುಕಿಗೆನೀನಲ್ಲದಿದ್ದರೂ
ನಿನ್ನಂಥವಳೊಬ್ಬಳುಬೇಕಿತ್ತು.