ಸಖೀ....
ನಿನ್ನ ನನ್ನೊಡಲಲ್ಲಿ
ಸೇರಿಸಿಕೊಳ್ಳಲು
ಆಗಸದಗಲ
ಹೃದಯ ಹಿಗ್ಗಿಸಿ
ತಾರೆಯಾಗಿ
ನಾನು ಕಾದಿದ್ದೇ ಬಂತು....

ಪ್ರೀತಿಯ
ಬೆಳಕು ಕಾಣದೇ
ಕಾಳ ಕತ್ತಲೆಯಲ್ಲಿ
ಬೆಳಗುವ ನಾನು
ನಿನ್ನ ಕಣ್ಣಿಗೂ
ಗೋಚರಿಸಲಿಲ್ಲ
ಪಡುವಣದಿ ಗೂಡು ಸೇರಿ
ರವಿಯು ವಿರಮಿಸುವವರೆಗೆ...