ಖಾಲಿಯಾಗಿದ್ದ ನನ್ನೆದೆಯ

ಬಿಳಿ ಹಾಳೆಯ ಮೇಲೆ

ಚಿತ್ತಾರ ಬಿಡಿಸಿದಾಕೆ

ನೀನಲ್ಲವೇ...?

ನನ್ನೊಳಗೂ ಒಂದು

ಮುಗ್ದ ಮನಸ್ಸನ್ನು

ಪರಿಚಯಿಸಿದಾಕೆ

ನೀನಲ್ಲವೇ....?

ಸ್ಥಿರವಾಗಿದ್ದ ನನ್ನ ಮನವ

ನಿನ್ನೆಡೆಗೆ ಸೆಳೆದದ್ದು

ಆ ನಿನ್ನ ಬೆರಗು

ಕಂಗಳೇ ಅಲ್ಲವೇ....?

ಆ ನಿನ್ನ ಮುದ್ದ ಕಂಗಳಲೇ

ಜನುಮ ಜನುಮಗಳ

ಬಂಧವನು ಈ ಪೆದ್ದು

ಮನಸಲಿ ಬೆಸೆದವಳು

ನೀನೇ ಅಲ್ಲವೇ....?

                                                                                   ಕವಿ... ದೇವರಾಜ್.