ನೆನಪುಗಳು ಬರೆದಂತೆ

ಕನಸುಗಳು ಮೂಡುತಿವೆ..,

ದಿನಗಳು ಕಳೆದಂತೆ

ಮನಸುಗಳು ಬೆರೆಯುತಿವೆ...

ಹುಸಿಯಾಸೆ ಮನದೊಳಗೆ

ಗೂಡೊಂದ ಕಟ್ಟುತಿದೆ...

ಗೂಡಲ್ಲಿ ಕಲ್ಪನೆಯ

ಅರಮನೆಯ ಚಿತ್ರಿಸಿದೆ...

ಅದರೊಳಗೆ ಮಾಯದ

ಪ್ರೀತಿಯನು ಸೃಷ್ಠಿಸಿದೆ...

ಸೃಷ್ಠಿಯಾದ ಪ್ರೀತಿಯ

ಪದಗಳನು ಜೋಡಿಸಿದೆ...

ಪದಗಳನು ಜೋಡಿಸುತಾ

ಕವಿತೆಯನು ಬರೆಯುತಿಯೆ...

ಆ ಕವಿತೆಯು ಹಾಡಾಗಿ

ಹೃದಯವನು ಶೃಂಗಾರಗೊಳಿಸಿದೆ...

                                   -ಕವಿ

                                         ದೇವರಾಜ್  ಟಿ.ವಿ

                                          98869-80244