ಮಂಜು ಮುಸುಕಿದೆ ಭುವಿಗೆ
ಎಲೆಗಳುದುರಿವೆ ಗಿಡಗಳಲಿ
ಬಿರುಕು ಮೂಡಿವೆ ನೆಲದಲಿ
ಹೊಸ ಚೈತ್ರದ ಮುನ್ನುಡಿಯೋ ಇದು

ಕಾಣುವುದೆಲ್ಲ ಬಿರಿದ ಮುಖಗಳೆ
ಕಂಪು ಬೀರದಾಗಿವೆ ಸುಮಗಳು
ಸೂರ್ಯನಿಗಾಗಿ ಕಾಯುತಿದೆ ಜಗವೆ
ಹೊಸ ಚಿಗುರಿಗೆ ಇದೆ ಸ್ವಾಗತವು

ಹೊಸ ಎಲೆಳರಳುವವು ಗಿಡಗಳಲಿ
ಹೊಸ ಜೀವ ಕುಡಿಯೊಡೆಯುವುದು ನೆಲದಲಿ
ಭರದ ಭವದ ಹರಿವನು ದಾಟಿಸುವ
ಹರಿಗೋಲೆ ಭರವಸೆಯು

ಮಂದ್ರದಿಂದ ತಾರಕಕೆ
ತಾರಕದಿಂದ ಮಂದ್ರಕೆ
ಏರಿಳತದ ಸ್ವರವೇ ಬದುಕು
ಸಂಗೀತಗಾರನೇ ಭರವಸೆಯು


ಗುರುಶಿಷ್ಯ (ರಾಘವೇಂದ್ರ ಗುಡಿ)