ಅಂದು ಮನೆ ಬಾಗಿಲಿನ ತನಕ ಕಣ್ಣೀರಿಗೂ ಕರಗದೆ
ಹರಿದಿದ್ದ ಹೊಳೆಯ ಬಿರುಸು ನೀರಿನ,
ಕನ್ಯೆಯೆಂದು ಗೊತ್ತಿದ್ದೂ, ನನ್ನ ಬಟ್ಟೆಯೊಡನೆ ಸರಸವಾಡಲು ಯತ್ನಿಸಿ
ಬೇಸತ್ತು ತಮ್ಮ ಕುರುಹು ಬಿಟ್ಟ ಮುಳ್ಳುಗಳ,
ಕಾಲಿಗೆ ಚುಚ್ಚತೊಡಗಿದ ನಿನ್ನ ಕಲ್ಲುಗಳ ಋಣ ತೀರಿತು ಇಂದು
ಮನೆಯ ಹಂಚಿನೊಳಗೆ ತೂರಿಕೊಂಡು
ನನ್ನ ಮುಖವನ್ನು ಚುಂಬಿಸಲು ಯತ್ನಿಸಿದ ನಿನ್ನ ಹನಿಗಳ
ಪಾತ್ರೆಯನ್ನಿಟ್ಟರೂ ಚಿಮ್ಮುತ್ತಾ ಮುಖದೆಡೆಗೆ ಹಾರುತ್ತಾ ಬರುವ ಕಾಮಿಯ
ಮೊಗೆಮೊಗೆದು ಎಸೆದರೂ ಇಂಗದ ಕಾಡುವ ನಿನ್ನ ಪ್ರೀತಿಯ,
ಮಾಸದ ಬದುಕಿನ ಒರತೆಯ ಋಣ ತೀರಿತು ಇಂದು
ಕೇಳಬೇಕಿನಿಸಿದರೂ ದೂರ ದೂರಕ್ಕೂ ಕೇಳದ ಇಂಚರ
ಮುನಿದ ಕಾರಣ ಮರೆತು ಹೋದೆ ಎಂಬಂತೆ ಹಾಡಿಸಿದ್ದೆ ನೀನು
ಬೆಳಕಿನಲ್ಲೂ ಕಾಣದ ದೂರದಲ್ಲಿ ಉಲಿದಿದ್ದ ಪಕ್ಷಿಗಳ
ಕತ್ತಲ ಪರಿವೆಯಿಲ್ಲದೇ ಗುನುಗುಟ್ಟುತ್ತಾ ಬಳಿ ಬಂದಿದ್ದ ಜೀರುಂಡೆಯ
ಮುಗಿಯದ ಮೇಲುಬೀಳುಗಳ ಮತ್ತು ಬಯಕೆಗಳ ಋಣ ತೀರಿದು ಇಂದು
ಅಂದು ತೀರಿತ್ತು ಋಣ ನಿನ್ನ ಮನೆಯ ತುಳಸಿ ಗಿಡದ
ಇಂದು ತೀರಿದೆ ಋಣ ಪ್ರತಿ ಸೂರ್ಯೋದಯ ಸೂರ್ಯಾಸ್ತಗಳ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಮಳೆಗೇನು ಗೊತ್ತು
ಅಸ್ತ್ರ
ಬಹಿಷ್ಕೃತ!
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)