ಕಣ್ಣೀರ ಹನಿಯಲ್ಲಿ 

ನೆನೆದ ನೆನಪುಗಳು

ಮೆತ್ತನೆಯ ರೆಪ್ಪೆಯಲ್ಲಿ 

ಅಪ್ಪಿದ ನೆನಪುಗಳು

ಕಣ್ಣು ಮುಚ್ಚಿ ಕುಳಿತಲ್ಲಿ

ಮುತ್ತಿವೆ ನೆನಪುಗಳು

ನೆನೆದವರ ಮನದಲ್ಲಿ

ಮನೆ ಮಾಡುವ ನೆನಪುಗಳು

ಸುಂದರ ಮಧುರ ಸುಮಧುರ

ಕ್ಷಣ ಕ್ಷಣ ನಗಿಸುವ ಆ ಸವಿ ನೆನಪುಗಳು