ಸುಂದರ ಕನಸಿಗೊಂದು ಸುಂದರ ಮನಸಿನ ಹುಡುಕಾಟ

ಆ ಕನಸ ನಂಬಿ ನಾ ಪಯಣಿಸುತ್ತಿರುವೆ ಹಗಳಿರುಳು

ನನ್ನ ಕನಸಿಗೆ ಅರ್ಥ ಸಿಗುವುದೆಂದು ನಾ ಹೋರಟಿರುವೆ

 ನನ್ನ ಮನಸಿಗೆ ಮನಸಾದ ಸಂಗಾತಿ ಸಿಗುವಳೆಂದು ನಾ ಹೋರಟಿರುವೆ||

 

ಆ ದೇವರಿಗೂ ಹೇಳಿದೆ ನಾ ನನ್ನ ಮನಸು ಹುಡುಕಿ ಕೊಡಲು

ನನ್ನ ಜೀವನದ ಬಾಳಿನಲ್ಲಿ ಬೆಳಕು ಅವಳೇ ನನ್ನವಳೆಂದು

ವಿಶ್ವದ ರೂಪವತಿಯರಿಗಿಂತಲೂ ಮಿಗಿಲಾದ ಅಪ್ಸರೆ ನನ್ನ ಮನಸಿನವಳು

ನನ್ನ ಕನಸಿನ ಮನಸಿನ ರಾಣಿ, ಎಲ್ಲಿ ತಂಗಿರುವಳೆಂದು ಹುಡುಕುತ್ತಿರಲು|

 

ನನ್ನ  ಜೀವದಲ್ಲಿ ಮನೆ ಮಾಡಿದ ಕನಸಿನ ಮನಸಿನ ಮಲ್ಲಿಗೆಯವಳು

ಅವಳಿಗಾಗಿ ನಾ ಕಾಯುತ್ತಿರುವೆ ನನ್ನ ಉಸಿರಿರುವರೆಗೂ

ಮುಂದೊಂದು ದಿನ ನನ್ನ ಮನಸಿನವಳು ಸಿಗುವಳೆಂಬ ಆಸೆಯ ಹೊತ್ತು

ಆ ಆಸೆ ಈಡೇರುವುದೆಂಬ ನಂಬಿಕೆ ಹೊತ್ತು ನಾ ಕಾಯುತ್ತಿರುವೆ|

 

                                                                            - ಹೆಚ್.ವಿರುಪಾಕ್ಷಪ್ಪ. ತಾವರಗೊಂದಿ.

                                                                               ಪೋನ್.ನಂ.8722597351